Sunday, September 8, 2024

Latest Posts

ಅರಿವಳಿಕೆ ನೀಡಲು ಹೋದ ವೈದ್ಯ, ಶಾರ್ಪ್ ಶೂಟರ್ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ

- Advertisement -

Bengaluru News: ಬೆಂಗಳೂರು: ಮೊನ್ನೇ ಅಷ್ಟೇ ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿದೆ. ಆದ್ರೆ, ಅರಣ್ಯಾಧಿಕಾರಿಗಳ ಕೈಗೆ ಸಿಗದೇ ಅತ್ತ ಬೋನಿಗೆ ಬೀಳದೇ ಆಟವಾಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಣೆಗಳಿದ ಅರಣ್ಯಾಧಿಕಾರಿಗಳು, ಅರವಳಿಕೆ ಮದ್ದನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಅರವಳಿಕೆ ಚುಚ್ಚುಮದ್ದು ನಿಡುವ ವೇಳೆ ವೈದ್ಯ ಕಿರಣ್ ಮೇಲೆ ದಾಳಿ ಮಾಡಿ ಪರಾರಿಯಾಗಿದೆ.

ಅರವಳಿಕೆ ಚುಚ್ಚುಮದ್ದು ನೀಡಲು ಬಂದಿದ್ದ ವೈದ್ಯ ಕಿರಣ್ ಮೇಲೆ ಚಿರತೆ ದಾಳಿ ಕುತ್ತಿಗೆಗೆ ಪರಚಿದೆ. ಕೂಡಲೇ ಅಂಬ್ಯುಲೆನ್ಸ್ ಮೂಲಕ ವೈದ್ಯ ಕಿರಣ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಇದೇ ವೇಳೆ ಚಿರತೆ ಶಾರ್ಪ್ ಶೂಟರ್ ಮೇಲೂ ದಾಳಿ ಮಾಡಿದೆ. ಲೆಪರ್ಡ್ ಟಾಸ್ಕ್ಫೋರ್ಸ್ ಶಾರ್ಪ್ ಶೂಟರ್ ಧನ್ರಾಜ್ ಎನ್ನುವರಿಗೆ ಕಾಲು ಮತ್ತು ಭುಜಕ್ಕೆ ಗಾಯವಾಗಿದೆ. ಹಾಗೇ ಕಾರ್ಯಚರಣೆಯಲ್ಲಿರುವ ಬಿಬಿಎಂಪಿ ಸಿಬ್ಬಂದಿ ಮಹೇಶ್ ಮೇಲೂ ದಾಳಿ ಮಾಡಿದ್ದು, ಅವರ ಕಾಲಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಚಿಕಿತ್ಸೆಗೆ ತೆರಳಿದ್ದಾರೆ.

ಇನ್ನು ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ, ಆ ಅರವಳಿಕೆ ನೀಡಿದ 15 ನಿಮಿಷ ಮಾತ್ರ ಪವರ್ ಇರುತ್ತೆ. ಈಗ ಅರವಳಿಕೆ ಮದ್ದು ನೀಡಿ 20 ನಿಮಿಷ ಕಳೆದಿದೆ. ಹೀಗಾಗಿ ಚಿರತೆ ಮತ್ತೆ ಆ್ಯಕ್ಟಿವ್ ಆಗಿರುವ ಸಾಧ್ಯತೆ ಇದೆ. ಇದರಿಂದ ಅರಣ್ಯ ಸಿಬ್ಬಂದಿ ಅಲರ್ಟ್ ಆಗಿದ್ದು, ಚಿರತೆ ತುಂಬಾ ಆ್ಯಕ್ಟಿವ್ ಆಗಿರುವುದರಿಂದ ಇದೀಗ ಹೈ ಡೋಸ್ ಅರಿವಳಿಕೆ ಮದ್ದು ನೀಡಿ ಸೆರೆಯಲು ಅರಣ್ಯ ಸಿಬ್ಬಂದಿ ಸಿದ್ದತೆ ನಡೆಸಿದೆ.

ನಿನ್ನೆ ತಡರಾತ್ರಿ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ರಾತ್ರಿ 11 ಗಂಟೆ ವೇಳೆ ಕಾಂಪೌಂಡ್ ಜಿಗಿದು ಚಿರತೆ ಓಡಿದೆ. ಪಾಳು ಬಿದ್ದಿರುವ ಬಿಲ್ಡಿಂಗ್ ಒಳಗೆ ನುಗ್ಗಿರುವ ಶಂಕೆ ಮೇಲೆ ತಡರಾತ್ರಿವರೆಗೂ ಹುಡುಕಾಟಲಾಯ್ತು ಆದ್ರೆ ಅಲ್ಲಿಯೂ ಚಿರತೆ ಕಾಣಸಿಗಲಿಲ್ಲ. ಕೆಲ ಹೊತ್ತು ಕಾಂಪೌಂಡ್ ಮೇಲೆ ಕುಳಿತು ಮತ್ತೆ ಹಳೆ ಕಟ್ಟಡದೊಳಗೆ ನುಗ್ಗಿದೆ. ಥರ್ಮಲ್ ಡ್ರೋಣ್ ‌ನಲ್ಲಿ ಚಿರತೆಯ ಚಲನವಲನ ಸೆರೆಯಾಗಿತ್ತು. ಹುಣಸೂರು ವನ್ಯಜೀವಿ ವಿಭಾಗದಿಂದ ಆಗಮಿಸಿದ್ದ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಬೆಳಗ್ಗೆ 6 ಗಂಟೆಯಿಂದ ಮತ್ತೆ ಕಾರ್ಯಾಚರಣೆ ಶುರು ಮಾಡಿದೆ.

ಬೊಮ್ಮನಹಳ್ಳಿಯ ಚಿರತೆ ಕಾರ್ಯಾಚರಣೆಗೆ ಶಾರ್ಪ್‌ಶೂಟರ್ಸ್‌ ಎಂಟ್ರಿ

ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ

- Advertisement -

Latest Posts

Don't Miss