Saturday, December 6, 2025

Latest Posts

ರಸ್ತೆಯಲ್ಲೇ ರೊಚ್ಚಿಗೆದ್ದ ಒಂಟಿಸಲಗ: ಇಟಿಎಫ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

- Advertisement -

Hassan News: ಹಾಸನ: ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಅತ್ತಿಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ದೈತ್ಯಾಕಾರದ ಕಾಡಾನೆ ರಸ್ತೆಗೆ ಬಂದಿತ್ತು. ಗ್ರಾಮದೆಡೆಗೆ ಹೋಗುತ್ತಿದ್ದ ಕಾಡಾನೆ ಕಂಡು ಗ್ರಾಮಸ್ಥರೆಲ್ಲ ಭಯಭೀತರಾಗಿದ್ದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ಸೈರನ್ ಹಾಕಿಕೊಂಡು ಕಾಡಾನೆಯನ್ನು ಎಸ್ಕಾರ್ಟ್ ಮಾಡಿ ಅರಣ್ಯಕ್ಕೆ ಓಡಿಸಲು ಪ್ರಯತ್ನಿಸಿದ್ದಾರೆ. ಸೈರನ್ ಸೌಂಡ್‌ಗೆ ಒಂಟಿಸಲಗ ರೊಚ್ಚಿಗೆದ್ದಿದೆ.  ಘೀಳಿಡುತ್ತಾ ಇಟಿಎಫ್ ಸಿಬ್ಬಂದಿಯ ವಾಹನದ ಮೇಲೆ ಅಟ್ಯಾಕ್ ಮಾಡಲೆತ್ನಿಸಿದೆ. ಕೂಡಲೇ ಇಟಿಎಫ್ ಸಿಬ್ಬಂದಿ ಜೀಪ್ ರಿವರ್ಸ್ ತೆಗೆದು, ಕಾಡಾನೆ ಗ್ರಾಮದೊಳನೆ ಹೋಗದಂತೆ ನೋಡಿಕೊಂಡಿದ್ದಾರೆ.

ಪ್ರಾಣದ ಹಂಗು ತೊರೆದು ಇಟಿಎಫ್ ಸಿಬ್ಬಂದಿ ಕಾಡಾನೆಯನ್ನು ಹಿಂಬಾಲಿಸಿ ಸ್ಥಳಾಂತರ ಮಾಡಿದ್ದಾರೆ. ಈ ವೇಳೆ ಸಿಟ್ಟಿಗೆದ್ದು, ಸಲಗ ಮರವನ್ನೇ ಬೀಳಿಸಿಕೊಂಡು ಹೋಗಿದೆ. ಇನ್ನು ಇಟಿಎಫ್ ಸಿಬ್ಬಂದಿ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

- Advertisement -

Latest Posts

Don't Miss