ಹಾಸನ: ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಎ.ಮಂಜು ಮೈಸೂರಿನ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಇಂದು ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ ಮಂಜು, ಅಲ್ಲಿನ ಜನರಲ್ಲಿ ರೇವಣ್ಣರಿಗೆ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.
ಇದೊಂದು ವಿಶೇಷ ಸಂದರ್ಭದಲ್ಲಿ ನಾನಿದ್ದೇನೆ.. ರೇವಣ್ಣರ ಜೊತೆಗೇ ಕೂತಿದಾರಲ್ಲ ಎಂದು ಕೆಲವರು ಅಂದುಕೊಳ್ಳಬಹುದು. ಹೀಗೆ ಆಗಬಹುದು ಎಂದು ನಾನೂ ಅಂದುಕೊಂಡಿರಲಿಲ್ಲ. ನಾನು ದೇವೇಗೌಡರನ್ನು ನೋಡಲು ಹೋದಾಗ, ಗೌಡರೇ ನನ್ನ ಕರೆದು ಕುಮಾರಸ್ವಾಮಿ ಅವರ ಜೊತೆ ಮಾತಾಡೋಕೆ ಹೇಳಿದ್ರು. ಆದರೆ ಹಾಸನದಲ್ಲಿ ರೇವಣ್ಣ ಅವರು ಒಪ್ಪಬೇಕಲ್ಲ ಎಂದು ಹೇಳಿದ್ದೆ. ಕಡೆಗೆ ರೇವಣ್ಣ ಅವರು ಭವಾನಿ ಪ್ರಜ್ವಲ್ ಅವರು ಮಾತನಾಡಿದರು. ನಾನು ಪಕ್ಚ ಸೇರಿದೆ ಎಂದು ಮಂಜು ಜೆಡಿಎಸ್ ಪಕ್ಷ ಸೇರಿದ ಸಂದರ್ಭವನ್ನ ವಿವರಿಸಿದ್ದಾರೆ.
ಈ ಬಾರಿ ಜೆಡಿಎಸ್ ಇಲ್ಲದೆ ಯಾವುದೇ ಸರ್ಕಾರ ಮಾಡಲು ಯಾರಿಗು ತಾಕತ್ತು ಇಲ್ಲ.. ಯಾರು ಏನೇ ಹೇಳಲಿ ಕುಮಾರಣ್ಣ ಇಲ್ಲದೆ ಜೆಡಿಎಸ್ ಇಲ್ಲದೆ ಸರ್ಕಾರ ರಚನೆ ಸಾಧ್ಯ ಇಲ್ಲ. ಚುನಾವಣೆ ಘೋಷಣೆಗೂ ಮುನ್ನವೇ 90 ಕ್ಷೇತ್ರದಲ್ಲಿ ಜನರ ಮನಸ್ಸು ಗೆದ್ದ ನಾಯಕ ಕುಮಾರಣ್ಣ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಕೂಡ ಕೊಟ್ಟ ಮಾತಿನಂತೆ ಸಾಲಾ ಮನ್ನ ಮಾಡಿದ್ದು ಕುಮಾರಸ್ವಾಮಿ. ರೈತರನ್ನು ಆರ್ಥಿಕವಾಗಿ ಸಧೃಡ ಮಾಡಬೇಕು ಅನ್ನೋದು ಕುಮಾರಸ್ವಾಮಿ ಅವರ ಕನಸು. ರೈತರ ಬಗ್ಗೆ ಚಿಂತನೆ ಮಾಡೋರು ಮಾತ್ರ ಜನ ನಾಯಕ ಆಗಲು ಸಾಧ್ಯ. ಬೇರೆ ರಾಜ್ಯದಂತೆ ನಮ್ಮ ರಾಜ್ಯ ಅಭಿವೃದ್ಧಿ ಆಗಬೇಕಾದರೆ ಪ್ರಾದೇಶಿಕ ಪಕ್ಷ ಬೆಳೆಯಬೇಕು ಎಂದು ಎ.ಮಂಜು ಹೇಳಿದ್ದಾರೆ.
‘ನಾವಿಬ್ರು ಹೊಡೆದಾಡ್ತಾರೆ ಅನ್ಕೊಂಡ್ರೆ ಬೆಳಿಗ್ಗೆ ಎದ್ದು ನಾವು ಸರಿಯಾಗಿರ್ತಿವಿ’
‘ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ’