Thursday, May 16, 2024

Latest Posts

ಚಪ್ಪಲಿ ಹಾರ ಹಾಕಿಕೊಂಡು ಮತ ಕೇಳಲು ಬಂದ ಪಕ್ಷೇತರ ಅಭ್ಯರ್ಥಿ..

- Advertisement -

National Political news: ಸದ್ಯ ಎಲ್ಲೆಡೆ ಲೋಕಸಭೆ ಚುನಾವಣೆಯದ್ದೇ ಸುದ್ದಿ. ತಮ್ಮ ಇಷ್ಟದ ಪಕ್ಷಗಳ ಬಗ್ಗೆ ಹೊಗಳುವವರು ಕೆಲವರಾದರೆ, ಇಷ್ಟವಿಲ್ಲದ ಅಭ್ಯರ್ಥಿಗಳಿಗೆ ಬೈಯ್ಯುವವರು ಹಲವರು. ಇನ್ನು ಹಲವು ಪಕ್ಷೇತರ ಅಭ್ಯರ್ಥಿಗಳು, ಜನರ ಗಮನ ಸೆಳೆಯಲು ಹಲವು ರೀತಿಯ ಸರ್ಕಸ್ ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ಅಲಿಘಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ತನಗೆ ಓಟ್ ಹಾಕಬೇಕು ಎಂದು ಪ್ರಚಾರ ಆರಂಭಿಸಿದ್ದಾರೆ. ಆದರೆ ಇವರು ಪ್ರಚಾರ ಮಾಡುತ್ತಿರುವ ರೀತಿ ಮಾತ್ರ ವಿಚಿತ್ರವಾಗಿದೆ. ಕೊರಳಿಗೆ ಚಪ್ಪಲಿ ಹಾರ ಹಾಕಿಕೊಂಡು, ಮನೆ ಮನೆಗೆ ಹೋಗಿ, ಪ್ರಚಾರ ಮಾಡುತ್ತಿದ್ದಾರೆ.

ಪಂಡಿತ್ ಕೇಶವ್ ದೇವ್ ಗೌತಮ್ ಈ ರೀತಿ ಪ್ರಚಾರ ಮಾಡುತ್ತಿದ್ದು, ಇವರ ಈ ವರ್ತನೆಗೂ ಕಾರಣವಿದೆ. ಅದೇನೆಂದರೆ, ಕೇಶವ್ ಅವರ ಪಕ್ಷದ ಚಿಹ್ನೆ ಚಪ್ಪಲಿ. ಹಾಗಾಗಿ ತಾನು ಚಪ್‌ಪಲಿ ಹಾರ ಹಾಕಿಕೊಂಡು ಪ್ರಚಾರ ನಡೆಸಿದ್ದೇನೆ ಎಂದಿದ್ದಾರೆ.

ತಾವು ಗೆದ್ದರೆ, ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎಂದಿರುವ ಕೇಶವ್, ಓರ್ವ ಆರ್‌ಟಿಐ ಕಾರ್ಯಕರ್ತ. ಅಲ್ಲದೇ, ಭ್ರಷ್ಟಾಚಾರ ವಿರೋಧಿ ಸಂಘಟನೆಯನ್ನೂ ನಡೆಸುತ್ತಿದ್ದಾರೆ. ಈ ಮೊದಲು ಎರಡು ಬಾರಿ ವಿಧಾನಸಭೆ ಚುನಾವಣೆಗೆ ಕೇಶವ್ ಸ್ಪರ್ಧಿಸಿದ್ದು, ಎರಡು ಬಾರಿಯೂ ಕೇಶವ್ ಸೋಲನ್ನಪ್ಪಿದ್ದಾರೆ. ಆದರೆ ಈ ಬಾರಿಯೂ ಒಮ್ಮೆ ಅದೃಷ್ಟ ಪರೀಕ್ಷೆ ನಡೆಸಿಯೇ ಬಿಡೋಣ ಎಂದುಕೊಂಡು ಕಣಕ್ಕಿಳಿದಿದ್ದಾರೆ.

ಈ ಬಾರಿ ಕಾಂಗ್ರೆಸ್ ಎದುರು ಮಗನಿಗೆ ಸೋಲು ಖಚಿತ: ಎ.ಕೆ.ಆ್ಯಂಟನಿ

ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಶ*ವವಾಗಿ ಪತ್ತೆ..

ಸಿದ್ದರಾಮಯ್ಯ ಇನ್ನೂ ವಿಧಾನಸಭಾ ಚುನಾವಣೆ ಮೂಡ್‌ನಿಂದ ಹೊರಬಂದಿಲ್ಲ: ಪ್ರಹ್ಲಾದ್ ಜೋಶಿ

- Advertisement -

Latest Posts

Don't Miss