Thursday, May 16, 2024

Latest Posts

ಈ ಬಾರಿ ಕಾಂಗ್ರೆಸ್ ಎದುರು ಮಗನಿಗೆ ಸೋಲು ಖಚಿತ: ಎ.ಕೆ.ಆ್ಯಂಟನಿ

- Advertisement -

Political News: ಇತ್ತೀಚಿಗಷ್ಟೇ ಅನಿಲ್ ಆ್ಯಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಿರುವಾಗ, ನಮ್ಮ ವಿರುದ್ಧ ಆ್ಯಂಟನಿ ಸೋಲುತ್ತಾರೆಂದು, ಖುದ್ದು ಅವರ ತಂದೆಯೇ ಮಗನ ಭವಿಷ್ಯ ನುಡಿದಿದ್ದಾರೆ.

ಅನಿಲ್ ಆ್ಯಂಟನಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಾಗಲಿದೆ ಎಂದು ಅನಿಲ್ ತಂದೆ ಎ.ಕೆ.ಆ್ಯಂಟನಿ ಹೇಳಿದ್ದಾರೆ. ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಅನಿಲ್ ಆ್ಯಂಟನಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಚುನಾವಣೆಗೆ ನಿಂತಿರುವ ತಮ್ಮ ಮಗನನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವ ಅಗತ್ಯವಿದೆ ಎಂದು ಎ.ಕೆ.ಆ್ಯಂಟನಿ ಹೇಳಿದ್ದಾರೆ.

ಅಪ್ಪನೇ ಮಗ ಸೋಲಲಿ ಎಂದು ಬಯಸುವಂಥ ತಪ್ಪಾದ್ರೂ ಏನಾಯ್ತು ಎಂಬ ಪ್ರಶ್ನೆಗೆ ಉತ್ತರ, ಅನಿಲ್ ಬಿಜೆಪಿ ಸೇರಿದ್ದೇ ದೊಡ್ಡ ತಪ್ಪು ಅಂತಿದ್ದಾರೆ ಎ.ಕೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ತಪ್ಪಿಗೆ, ಬಿಜೆಪಿಯನ್ನು ಸೋಲಿಸಲೇಬೇಕು ಎಂದು ತಂದೆಯೇ, ಮಗನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷ ಅಂದ್ರೆ ಕಾಂಗ್ರೆಸ್‌, ಕಾಂಗ್ರೆಸ್ ಅಂದ್ರೆ ಪಕ್ಷ ಅಂತ ಅಂದುಕೊಂಡಿರುವ ಎ.ಕೆ.ಆ್ಯಂಟನಿಗೆ ಮಗ ಬಿಜೆಪಿ ಸೇರಿರುವುದು ಒಂಚೂರು ಇಷ್ಟವಿಲ್ಲದಂತಾಗಿದೆ.

ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಶ*ವವಾಗಿ ಪತ್ತೆ..

ಸಿದ್ದರಾಮಯ್ಯ ಇನ್ನೂ ವಿಧಾನಸಭಾ ಚುನಾವಣೆ ಮೂಡ್‌ನಿಂದ ಹೊರಬಂದಿಲ್ಲ: ಪ್ರಹ್ಲಾದ್ ಜೋಶಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

- Advertisement -

Latest Posts

Don't Miss