Thursday, May 30, 2024

Latest Posts

ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಶ*ವವಾಗಿ ಪತ್ತೆ..

- Advertisement -

International News: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಇದೀಗ ಅಮೆರಿಕದಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

2023ರಲ್ಲಿ ಹೈದರಾಬಾದ್ ಮೂಲದ 25 ವರ್ಷದ ವಿದ್ಯಾರ್ಥಿ, ಮೊಹಮ್ಮದ್ ಅಬ್ದುಲ್ ಅರ್ಫಾತ್ ಮೂರು ವಾರಗಳಿಂದ ನಾಪತ್ತೆಯಾಗಿದ್ದರು. ಮಾರ್ಚ್ 7ರಂದು ಕುಟುಂಂಬಸ್ಥರೊಂದಿಗೆ ಮಾತನಾಡಿದ್ದ ಅರ್ಫಾತ್ ಮೊಬೈಲ್, ಇದಾದ ಬಳಿಕ ಸ್ವಿಚ್ ಆಫ್ ಆಗಿದೆ.

ಬಳಿಕ ಅನಾಮಿಕ ವ್ಯಕ್ತಿ ಕಾಲ್ ಮಾಡಿ, ನಿಮ್ಮ ಮಗನನ್ನು ಅಪಹರಿಸಿದ್ದೇವೆ. ದುಡ್ಡು ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ರಾಯಭಾರ ಕಚೇರಿಯವರ ಮೂಲಕ, ಸ್ಥಳೀಯ ಪೊಲೀಸರಿಗೆ, ಪೋಷಕರು ಈ ಬಗ್ಗೆ ದೂರು ನೀಡಿದ್ದರು.

ಆದರೆ, ಅರ್ಫಾತ್ ಇಂದು ಶವವಾಗಿ ಪತ್ತೆಯಾಗಿದ್ದಾನೆಂಬ ಸುದ್ದಿ ಬಂದಿದೆ. 2024ರಲ್ಲಿ ಅಮೆರಿಕದಲ್ಲಿ ಸಾವನ್ನಪ್ಪಿದವರಲ್ಲಿ ಅರ್ಫಾತ್ 11ನೇಯವರಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಆಗಿದ್ದು, ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ಪಡೆಯಲು ಅಮೆರಿಕದ ಕಾಲೇಜುಗಳಿಗೆ ಸೇರಿಸಲು ಹಿಂಜರಿಯುತ್ತಿದ್ದಾರೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

ಸಿದ್ದರಾಮಯ್ಯ ಇನ್ನೂ ವಿಧಾನಸಭಾ ಚುನಾವಣೆ ಮೂಡ್‌ನಿಂದ ಹೊರಬಂದಿಲ್ಲ: ಪ್ರಹ್ಲಾದ್ ಜೋಶಿ

ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಲಿದ್ದೇವೆ: ವಿನೋದ್ ಅಸೂಟಿ

- Advertisement -

Latest Posts

Don't Miss