Thursday, December 12, 2024

Latest Posts

ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು, ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ

- Advertisement -

Hassan News: ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ, ಹಾಸನದಲ್ಲಿ ನಡೆದಿದೆ. ಹಾಸನದ ಹೊಳೆನರಸಿಪುರ ತಾಲೂಕಿನ ಮಳಲಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಯಸಳೂರು ಪೊಲೀಸ್ ಠಾಣೆ ಪೇದೆ ಶರತ್‌ಗೆ ಗಂಭೀರ ಗಾಯವಾಗಿದೆ.

ಪೇದೆ ಶರತ್, ಜೂನ್ 15ರಂದು ಸಾಂದರ್ಭಿಕ ರಜೆ ತೆಗೆದುಕೊಂಡು, ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬ ಯುವಕನಿಗೆ, ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುತ್ತಿತ್ತು. ಈ ಜಗಳ ಬಿಡಿಲು ಶರತ್ ಮುಂದಾಗಿದ್ದಾರೆ.

ಈ ವೇಳೆ ಮಿಥುನ್, ಲೋಹಿತ್, ನಟರಾಜು ಮತ್ತಿತರು ಸೇರಿ ಶರತ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇವರೆಲ್ಲ ಶರತ್ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ನಟರಾಜು ಎಂಬುವವನು ಕಾರ್‌ನಿಂದ ಲಾಂಗ್‌ ತಂದಿದ್ದಾರೆ. ಈ ವೇಳೆ ಶರತ್ ಕನ್ವೆನ್ಶನ್ ಹಾಲ್‌ ಒಳಗೆ ಓಡಿ ಹೋಗಿದ್ದಾರೆ. ಆದರೂ ಬಿಡದ ದುರುಳಲು, ಹಾಲ್ ಒಳಗೆ ನುಗ್ಗಿ ಲಾಂಗ್‌ನಿಂದ ಮನಬಂದಂತೆ ಶರತ್ ಮೇಲೆ ಹಲ್ಲೆ ನಡೆಸಿದ್ದಾರೆ.  ಈ ವೇಳೆ ಪೇದೆ ಶರತ್ ಹಾಲ್‌ನಲ್ಲೇ ಕುಸಿದು ಬಿದ್ದಿದ್ದಾರೆ.

ಗಾಯಾಳುವಿಗೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೊಳೆನರಸಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಹಲ್ಲೆಯ ದೃಶ್ಯ, ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಚಿತ ಬಸ್ ಪ್ರಯಾಣ: ಮಗುವನ್ನು ಹಿಡಿದು ಬಾಗಿಲಿಗೆ ಜೋತುಗೊಂಡು ಪ್ರಯಾಣ

ಹು-ಧಾ ಪಾಲಿಕೆ ಮೇಯರ್ ಚುನಾವಣೆ : ದಾಂಡೇಲಿ ರೆಸಾರ್ಟ್ನತ್ತ ಬಿಜೆಪಿ ಪಾಲಿಕೆ ಸದಸ್ಯರು

‘ಅಕ್ಕಿ ಕೊಡುವುದಕ್ಕೆ ಯೋಗ್ಯತೆ ಇಲ್ಲವಾದರೆ ಅಂತಹ ಭರವಸೆಗಳನ್ನು ಯಾಕೆ ಕೊಟ್ಟಿದ್ದಿರಿ..?’

- Advertisement -

Latest Posts

Don't Miss