ಹಾಸನ: ಎಟಿಎಂ ಮಿಷನ್‍ಗಳಿಗೆ ಕಳೆದ ರಾತ್ರಿ ಯಾರೋ ಅಪರಿಚಿತರು ಪೂಜೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ನಡೆದಿದೆ.
ಶ್ರೀಮಂತಿಕೆ ಬಂದಾಗ ಈ ವಿಷಯಗಳನ್ನು ಮರಿಯಬೇಡಿ..
ನಗರದಲ್ಲಿ ಕಳೆದ ರಾತ್ರಿ ಮೂರು ಎಟಿಎಂಗಳಿಗೆ ಪೂಜೆ ಮಾಡಿರುವ ಅಪರಿಚಿತರು, ಅರಿಶಿನ ಕುಂಕುಮ ಹಚ್ಚಿ, ಅಕ್ಷತೆ ಇಟ್ಟು ಹೋಗಿದ್ದಾರೆ. ಇದು ಕಳ್ಳತನಕ್ಕೆ ಯತ್ನವೋ ಅಥವಾ ವಾಮಾಚಾರವೋ ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ.
ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು..
ಪಟ್ಟಣದ ಪ್ರಮುಖ ರಸ್ತೆಯ ಪಕ್ಕದಲ್ಲಿರುವ ಮೂರು ಎಟಿಎಂ ಮಿಷನ್‍ಗಳಿಗೆ ಅರಿಶಿನ ಕುಂಕುಮ ಹಚ್ಚಿ, ಅಕ್ಷತೆ ಇಟ್ಟು ಗಂಧದಕಡ್ಡಿ ಬೆಳಗಿ ಪೂಜೆ ಮಾಡಲಾಗಿದೆ. ಬ್ಯಾಂಕ್‍ನ ಸಿಬ್ಬಂದಿ ನಾವು ಪೂಜೆ ಮಾಡಿಲ್ಲ ಯಾರೂ ಮಾಡಿದ್ದಾರೋ ಗೊತ್ತಿಲ್ಲ ಎನ್ನುತ್ತಿದ್ದಾರೆ. ಕಳ್ಳತನಕ್ಕೆ ಯತ್ನಿಸಿದ್ದಾರೋ ಅಥವಾ ವಾಮಾಚಾರ ಮಾಡಿದ್ದಾರೋ ಎಂಬುದರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.