Wednesday, December 11, 2024

Latest Posts

ಟೀಚರ್ ತನ್ನನ್ನು ಫೇಲ್ ಮಾಡುತ್ತಾರೆಂದು ಫಿನಾಯಿಲ್ ಕುಡಿದ ವಿದ್ಯಾರ್ಥಿ

- Advertisement -

News: ಇಂದಿನ ಕಾಲದ ಮಕ್ಕಳಲ್ಲಿ ವಿದ್ಯಾಭ್ಯಾಸದ ವಿಷಯದಲ್ಲಿ ಅದೆಂಥ ಹೆದರಿಕೆ ಹುಟ್ಟಿದೆ ಎಂದರೆ, ಫೇಲ್ ಆದರೆ, ಅಥವಾ ಕಡಿಮೆ ಅಂಕ ಬಂದರೆ, ಯಾವುದಾದರೂ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲವೆಂದರೆ, ಸೀದಾ ಸಾವಿನ ದಾರಿ ಹಿಡಿಯುತ್ತಾರೆ. ಸರ್ಕಾರ ಈ ರೀತಿ ಕೇಸ್ ಕಡಿಮೆ ಮಾಡಬೇಕು ಎಂದು ರಿಸಲ್ಟ್ ಬರುವ ದಿನ ನದಿ, ಕೆರೆಯ ಬಳಿ ಪೊಲೀಸರನ್ನು ನೇಮಿಸುತ್ತಾರೆ. ಏಕೆಂದರೆ, ಯಾರಾದರೂ, ಆತ್ಮಹತ್ಯೆ ಮಾಡಿಕೊಳ್ಳಲು ಬಂದರೆ, ಅಂಥವರನ್ನು ತಡಿಯಲಿ ಎಂದು. ಅಲ್ಲದೇ, ವಿಷ ಖರೀದಿಸುವುದನ್ನು ಕೂಡ ಬ್ಯಾನ್ ಮಾಡಲಾಗಿದೆ.

ಆದರೆ ಇಲ್ಲೋರ್ವ ವಿದ್ಯಾರ್ಥಿ ಟೀಚರ್ ತನ್ನನ್ನು ಫೇಲ್ ಮಾಡುತ್ತಾರೆಂದು ತಾನೇ ಊಹಿಸಿಕೊಂಡು ಫಿನಾಯಿಲ್ ಕುಡಿದು, ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಕೇಂದ್ರೀಯ ವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, 9ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಇಬ್ಬರು ಶಿಕ್ಷಕರು ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆ ಆತ ಸೂಸೈಡ್ ನೋಟ್ ಬರೆದಿಟ್ಟು, ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ರಶ್ಮಿ ಎಂಬ ಶಿಕ್ಷಕಿ, ಮತ್ತೋರ್ವ ಶಿಕ್ಷಕ ಸೇರಿ ತನ್ನನ್ನು ಫೇಲ್ ಮಾಡುತ್ತೇನೆ ಎಂದು ಹೆದರಿಸಿದ್ದಾರೆಂದು ಆತ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ.

ಕಲಿಯುವುದರಲ್ಲಿ ಈ ಬಾಲಕ ಅಷ್ಟೇನು ಜಾಣನಲ್ಲ. ಹಾಗಾಗಿ ಶಾಲೆಯಲ್ಲಿ ಆಗಾಗ ಶಿಕ್ಷಕರ ಬಳಿ ಬೈಯ್ಯಿಸಿಕೊಳ್ಳುತ್ತಿದ್ದ. ಅಲ್ಲದೇ ಪೋಷಕರು ಹೇಳುವ ಪ್ರಕಾರ, ಒಂದು ವರ್ಷದಿಂದಲೂ, ಈ ಇಬ್ಬರು ಶಿಕ್ಷಕರು ಆ ಬಾಲಕನನ್ನು ಫೇಲ್ ಮಾಡುತ್ತೇನೆ ಅಂತಲೇ ಹೇಳುತ್ತಿದ್ದರಂತೆ. ಆದರೆ ಅವರ ಮಾತಿಗೆ ಹೆದರಿರುವ ಬಾಲಕ, ಶಾಲೆಯಿಂದ ಬಂದು, ಡೆತ್ ನೋಟ್ ಬರೆದಿಟ್ಟು ಫಿನಾಯಿಲ್ ಸೇವಿಸಿದ್ದಾನೆ.

ಬಳಿಕ ವಾಂತಿ ಮಾಡಲು ಶುರು ಮಾಡಿದ್ದರಿಂದ, ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಫಿನಾಯಿಲ್ ಕುಡಿದು ಸಾಯಲು ಪ್ರಯತ್ನಿಸಿದ್ದಾನೆಂದು ಗೊತ್ತಾಗಿದೆ. ಬಳಿಕ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಗು ಮತ್ತು ಪೋಷಕರ ಹೇಳಿಕೆ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss