Sunday, September 8, 2024

Latest Posts

ಹಂದಿ ಹೃದಯವನ್ನು ಹೃದ್ಯೋಗಿಗೆ ಯಶಸ್ವಿಯಾಗಿ ಕಸಿ ಮಾಡಿದ ಯು ಎಸ್ ವೈದ್ಯರು

- Advertisement -

ವೈದ್ಯ ಲೋಕದಲ್ಲಿ ಒಂದಿಲ್ಲೊoದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ, ಎಲ್ಲರೂ ಬೆರಗಾಗುವಂತಹ ಆವಿಷ್ಕಾರ ಅಮೆರಿಕಾ ವೈದ್ಯಲೋಕದಲ್ಲಿ ನಡೆದಿದೆ. ಈ ಸರ್ಜರಿಗೆ ಒಳಗಾದವರು ಡೇವಿಡ್ ಬೆನೆಟ್ ಇವರು ಮೇರಿಲ್ಯಾಂಡ್ ನಿವಾಸಿಯಾಗಿದ್ದಾರೆ. ಇವರಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಯು ಎಸ್ ವೈದ್ಯರು ಕಸಿ ಮಾಡಿದ್ದಾರೆ.

ಸರ್ಜರಿ ಬಳಿಕ ಮಾತನಾಡಿರುವ ಅವರು ಇದು ಮಾಡು ಇಲ್ಲವೇ ಮಡಿ ಎಂಬoಥ ಸರ್ಜರಿಯಾಗಿತ್ತು. ನನಗೆ ಬದುಕುಳಿಯಲು ಕೊನೇ ಅವಕಾಶವಾಗಿತ್ತು ಎಂದಿದ್ದಾರೆ. ಈ ವ್ಯಕ್ತಿಗೆ 57 ವರ್ಷ ವಯಸ್ಸಾಗಿತ್ತು. ಈ ಆವಿಷ್ಕಾರ ವೈದ್ಯಲೋಕದಲ್ಲಿಯೇ ಪ್ರಥಮವಾಗಿದೆ. ಮುಂದೊoದು ದಿನ ಅಂಗಾoಗ ದಾನ ಕೊರತೆಯ ಗಂಭೀರತೆಯನ್ನು ಕಡಿಮೆ ಮಾಡಬಲ್ಲದು ಎಂಬ ಆಶಯವನ್ನು ಮೂಡಿಸಿದೆ. ಈ ಪ್ರಕ್ರಿಯೆ ನಡೆದದ್ದು ಯು ಎಸ್‌ನ ಮೇರಿಲ್ಯಾಂಡ್ ಯೂನಿವರ್ಸಿಟಿಯ ಮೆಡಿಕಲ್ ಸ್ಕೂಲ್‌ನಲ್ಲಿ. ಒಟ್ಟಾರೆ ಈ ಆವಿಷ್ಕಾರ ಮಾಡಿದ ವೈದ್ಯರಿಗೆ ಮೆಚ್ಚುಗೆ ಹೇಳಲೇಬೇಕು.

- Advertisement -

Latest Posts

Don't Miss