Sunday, September 8, 2024

Latest Posts

ಹೊಸ ಕೋವಿಡ್ ಪ್ರಕರಣಗಳ ಅಲೆ ಜಾಗತಿಕ ಆರೋಗ್ಯಕ್ಕೆ ಅಡ್ಡಿ

- Advertisement -

ಜಗತ್ತಿನಾದ್ಯಂತ ಈಗ ಕೊವಿಡ್-19 ವ್ಯಾಪಿಸುತ್ತಿದ್ದು ಒಂದನೇ ಅಲೆ, ಎರಡನೇ ಅಲೆ ಗಿಂತ ಮೂರನೇ ಅಲೆ ಭಯಂಕರವಾಗಿದೆ. 2021 ರ ಡಿಸೆಂಬರ್ 27 ಮತ್ತು 2022 ರ ಜನವರಿ 2ರ ನಡುವೆ ಜಾಗತಿಕವಾಗಿ 9.5 ಮಿಲಿಯನ್ ಹೊಸ ಕೊವಿಡ್-19 ಪ್ರಕರಣಗಳು ದಾಖಲಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.71 ರಷ್ಟು ತೀವ್ರವಾಗಿ ಕೊವಿಡ್ ಕೇಸುಗಳು ಹೆಚ್ಚಾಗಿವೆ.

ಮತ್ತು ಪ್ರಪಂಚದಲ್ಲಿ ಈ ಬಾರಿ ಕೋವಿಡ್-19 ಮತ್ತು ಒಮಿಕ್ರಾನ್ ಸುನಾಮಿ ರೀತಿಯಲ್ಲಿ ಅಪ್ಪಳಿಸುತ್ತಿದೆ. ಇದರಿಂದ ಆರೋಗ್ಯ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(who) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಭಾರತದಲ್ಲಿ
ಯೂ ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನಲೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಹೇಳಿರುವುದಕ್ಕೂ ಎಚ್ಚರಿಕೆಯ ಗಂಟೆಯAತಿದೆ.
ಈ ಸಮಯದಲ್ಲಿ ಕೊರೊನಾದಿಂದಾಗಿ ಹೊಸ ಸಾವಿನ ಸಂಖ್ಯೆಯು ಶೇ. 10 ರಷ್ಟು ಹೆಚ್ಚಳವಾಗಿದೆ. ಕಳೆದ ವಾರ 41.000 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಈಗೆ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆಯೇ ಹೊರತು ಕಡಿಮೆಯಾಗಿಲ್ಲ.
ಕೋವಿಡ್ 19 ಏರಿಕೆಯ ಬಗ್ಗೆ ಪ್ರಸ್ಥಾಪಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಘೆಬ್ರೆಯೆಸಸ್, ಕಳೆದ ವಾರ ಇದುವರೆಗೆ ಅತಿ ಹೆಚ್ಚು ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ಇನ್ನೂ ಅದೆಷ್ಟೋ ಕೇಸ್‌ಗಳು ದಾಖಲೆಯೇ ಆಗಿಲ್ಲ ದಾಖಲೆಯಾದ ಪ್ರಕರಣಗಳೇ ಇಷ್ಟಿದೆ ಎಂದಮೇಲೆ ನಾವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅವಶ್ಯವಾಗಿದೆ.
ಜನರು ತಕ್ಕಮಟ್ಟಿಗೆ ಕೋವಿಡ್ ನಿಂದ ತಪ್ಪಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಬಾರದು, ಉತ್ತಮವಾದ ಮಾಸ್ಕ್ಗಳನ್ನು ಧರಿಸಬೇಕು. ಜನಸಂದಣಿಯನ್ನು ತಪ್ಪಿಸಬೇಕು, ಉತ್ತಮ ಗಾಳಿಯನ್ನು ಉಸಿರಾಡಬೇಕು. ಎಂದು ಅವರು ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss