Hubballi News: ಹುಬ್ಬಳ್ಳಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ನವನಗರ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವನಗರ ಠಾಣೆಯ ಪಿಎಸ್ಐ ಬಿಎಸ್ ಸಾತಣ್ಣವರ್ ಹದ್ದಿನ ಕಣ್ಣಿಗೆ ಗಾಂಜಾ ಪೆಡ್ಲಾರ್ ಗಳು ಕ್ಯಾಚ್ ಆಗಿದ್ದಾರೆ. ಪೆಟ್ರೋಲಿಂಗ ವೇಳೆ ಅನುಮಾನಸ್ಪದವಾಗಿ ನವನಗರದ ಆರ್ಟಿಓ ಹತ್ತಿರ ನಿಂತಿದ್ದ ಇಬ್ಬರು ಯುವಕರು ಹಾಗೂ ಒಂದು ಹುಡುಗಿಯನ್ನು ವಿಚಾರಿಸಿದಾಗ ಅವರ ಹತ್ತಿರ ಮಾದಕ ವಸ್ತು ಗಾಂಜಾ ಲಭ್ಯವಾಗಿದೆ.
ಸಿಕ್ಕಿಬಿದ್ದ ಮೂವರು ಆರೋಪಿಗಳನ್ನು ವಿಚಾರಣೆ ಮಾಡಿದಾಗ ತಾವು ಗಾಂಜಾ ಮಾರಾಟ ಮಾಡುತ್ತಿದ್ದು ತಿಳಿದು ಬಂದಿದೆ ಕೂಡಲೇ ಮೂವರನ್ನು ವಶಕ್ಕೆ ಪಡೆದ ಪಿಎಸ್ಐ ಸಿಬ್ಬಂದಿ ಆರೋಪಿಗಳಿಂದ 130 ಗ್ರಾಂ ತೂಕದ ಗಾಂಜಾ 1500/- ನಗದು ಹಾಗೂ ಕೃತ್ಯಕ್ಕೆ ಬಳಸಿದ ಹೊಂಡ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಮೊಹಮ್ಮದ್ ಮುಖೀದ್ ಅಹ್ಮದ್ ಬೆಲಿಪ್ 19 ವರ್ಷ ಆಕಾಶ್ ಹೇಬಸರ್ 22 ವರ್ಷ ಹಾಗೂ ಕುಮಾರಿ ವೈಷ್ಣವಿ ಸುತಗಟ್ಟಿ 19 ವರ್ಷ ಬಂದಿತ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
‘ಸ್ಪಂದನಾ ಮಿತಭಾಷಿ, ಒಳ್ಳೆ ಹುಡುಗಿ. ಹೀಗೆ ಆಗಿರೋದು ನಂಬೋಕ್ಕೆ ಆಗ್ತಿಲ್ಲಾ’
ನಿಮಗೆ ಪೆಟ್ಟಾಗಿಲ್ಲಾ ತಾನೇ..?: ಬೈಕ್ ಮೇಲಿಂದ ಬಿದ್ದ ವ್ಯಕ್ತಿಯನ್ನು ವಿಚಾರಿಸಿದ ರಾಹುಲ್ ಗಾಂಧಿ..




