ಈ ಸಲ ಕಪ್ ಆರ್‌ಸಿಬಿಯದ್ದೇ ಎಂದು ಭವಿಷ್ಯ ನುಡಿದ ಎಬಿ ಡೆವಿಲಿಯರ್ಸ್..

Sports News: ಐಪಿಎಲ್ ಆಟ ಶುರುವಾಗಿ 16 ಸೀಸನ್ ಮುಗಿದಿದೆ. ಅಂದಿನಿಂದ ಹಿಡಿದು 16ನೇ ಸೀಸನ್ ಮುಗಿಯುವವರೆಗೂ ಕನ್ನಡಿಗರು, ಆರ್‌ಸಿಬಿಗೆ ಸಪೋರ್ಟ್ ಮಾಡುತ್ತಾ, ಈ ಸಲ ಕಪ್ ನಮ್ಮದೇ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಒಮ್ಮೆಯೂ ಕಪ್ ನಮ್ಮದಾಗಲಿಲ್ಲ. ಆದರೆ ನಮ್ಮ ತಂಡ ಕಪ್ ಗೆಲ್ಲದಿದ್ದರೂ, ನಾವು ಸದಾ ಆರ್‌ಸಿಬಿಗೆ ಸಪೋರ್ಟ್ ಮಾಡುವ ಅತ್ಯುತ್ತಮ ಫ್ಯಾನ್ಸ್ ಅಂತಾ ಅನ್ನಿಸಿಕೊಂಡಿದ್ದೇವೆ.

ಆದರೆ ಈ ಬಾರಿ ಕಪ್ ಆರ್‌ಸಿಬಿಯದ್ದೇ ಎಂದು ಆರ್‌ಸಿಬಿ ತಂಡದ ಮಾಜಿ ಆಟಗಾರ ಎ ಬಿ ಡೆವಿಲಿಯರ್ಸ್ ಹೇಳಿದ್ದಾರೆ. ಈ ಬಾರಿ ಆರ್‌ಸಿಬಿ ಗೆಲ್ಲುವ ಭರವಸೆ ಇದೆ. 2024ರಲ್ಲಿ ನಾವು ಮೊದಲ ಬಾರಿ ಐಪಿಎಲ್ ಕಪ್ ಗೆಲ್ಲಲಿದ್ದೇವೆ ಎಂದು ಡೆವಿಲಿಯರ್ಸ್ ಹೇಳಿದ್ದಾರೆ.

ಸದ್ಯ ಐಪಿಎಲ್‌ನಿಂದ ನಿವೃತ್ತಿ ತೆಗೆದುಕೊಂಡಿರುವ ಡೆವಿಲಿಯರ್ಸ್, ತಮ್ಮ ತಂಡವಾದ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ ಭವಿಷ್ಯ ನಿಜವಾಗಲಿ, ಈ ಸಲ ಕಪ್ ನಮ್ಮದಾಗಲಿ ಎಂಬುದೇ, ಆರ್‌ಸಿಬಿ ಫ್ಯಾನ್ಸ್ ಆಶಯ.

ಆಫ್ರಿಕಾ ಕ್ರಿಕೇಟಿಗನಿಗೂ ಇಷ್ಟವಾಗಿದೆಯಂತೆ ಈ ರಾಮಭಜನೆ..

ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್

ರೇಪ್‌ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..

About The Author