Mysuru News: ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಅಪಘಾತ ಸಂಭವಿಸಿದ್ದು, ಬಸವ ಜಯಂತಿ ಆಚರಣೆಗೆ ಹೋಗುತ್ತಿದ್ದ ಟೆಂಪೋ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. 9 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕ“ಡಿಸಲಾಗುತ್ತಿದೆ.
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವಿಷಯ ತಿಳಿದ ಹೆಚ್.ಡಿ.ಕೋಟೆಯ ಬಿಜೆಪಿ ಮುಖಂಡ ಕೃಷ್ಣ ನಾಯಕ್, ಅಪಘಾತದಲ್ಲಿ ಗಾಯಗ“ಂಡವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆಸ್ಪತ್ರೆಗೆ ಆಗಮಿಸಿ, ಆರೋಗ್ಯ ವಿಚಾರಿಸಿರುವ ಕೃಷ್ಣ ನಾಯಕ್, ನಾನು ಗಾಯಾಳುಗಳಿಗೆ ಎಲ್ಲ ರೀತಿಯ ಸಹಾಯಕ್ಕೆ ತಯಾರಿದ್ದೇನೆ, ನಿಮ್ಮ“ಂದಿಗೆ ನಾನಿದ್ದೇನೆ ಎಂದು ಕೃಷ್ಣ ನಾಯಕ್ ಭರವಸೆ ನೀಡಿದ್ದಾರೆ.
ಅಲ್ಲದೇ, ಮಕ್ಕಳನ್ನು ಎಲ್ಲಾದರೂ ಕಳುಹಿಸುವಾಗ, ಮನೆಯಲ್ಲಿರುವ ಹಿರಿಯರು ಜವಾಬ್ದಾರಿ ತೆಗೆದುಕ“ಳ್ಳಬೇಕು. 15ರಿಂದ 16 ವರ್ಷದ ಹುಡುಗರು ತಮ್ಮ ಪಾಡಿಗೆ ತಾವು ಬಂದಿದ್ದಾರೆ. ಯಾರೋ ಇಬ್ಬರು ಅದರಲ್ಲಿ ಹಿರಿಯರಿದ್ದಾರೆ. ಅಪಘಾತ ಸಂಭವಿಸಿ, ಇಬ್ಬರು ಹುಡುಗರಿಗೆ ಸಿರಿಯಸ್ ಇದೆ.
ಹಾಗಾಗಿ ನಾವು ನಮ್ಮ ಜಿಲ್ಲಾಧ್ಯಕ್ಷರು, ಬಸವರಾಜಪ್ಪರು, ಗುರುಸ್ವಾಮಿಯವರು, ಸೇರಿ ನಾವೆಲ್ಲಾ ಬಂದು ಅವರಿಗೆ ಭರವಸೆ ನೀಡಿದ್ದೇವೆ. ಅಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿದ್ದೇವೆ ಎಂದಿದ್ದಾರೆ.
ಅಲ್ಲದೇ, ನಮ್ಮ ಕೋಟೆ ರಸ್ತೆ ಅವೈಜ್ಞಾನಿಕವಾಗಿದೆ. 10ರಿಂದ 15 ವರ್ಷವಾದರೂ ಆ ರಸ್ತೆ ಸರಿಯಾಗಿಲ್ಲ. ಪ್ರತಿದಿನ ಆ ರಸ್ತೆಯಲ್ಲಿ ಅಪಘಾತವಾಗುತ್ತದೆ. ಇಂದಿನವರೆಗೂ ಆ ರಸ್ತೆ ಸರಿ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು, 2 ಬಾರಿ ರಾಜ್ಯದ ಸಿಎಂ ಆಗಿದ್ದರು. ಆದರೆ ಇವರೆಗೂ ರಸ್ತೆಗೆ ಅನುದಾನ ನೀಡಿಲ್ಲ. ಬರೀ ಬರುತ್ತಾರೆ, ಗುದ್ದಲಿ ಪೂಜೆ ಮಾಡಿ ಹೋಗುತ್ತಾರೆ ಎಂದು ಕೃಷ್ಣ ನಾಯಕ್ ಕಿಡಿಕಾರಿದ್ದಾರೆ.
ಈಗ ಅಪಘಾತಕ್ಕೀಡಾದವರಿಗೆ ಚಿಕಿತ್ಸೆ, ಮೆಡಿಸಿನ್ ಸರ್ಕಾರದಿಂದ ಉಚಿತವಾಗಿ ಸಿಗುವಂತೆ ಮಾಡಬೇಕು. ರಸ್ತೆಯನ್ನು ಸರಿ ಮಾಡಿಸಬೇಕು, ಸ್ಥಳೀಯ ಶಾಸಕರು ಕೂಡ ಈ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಕಳೆದ 10 ವರ್ಷಗಳಿಂದ ಆ ರಸ್ತೆಯನ್ನು ಸರಿ ಮಾಡಿಸುವವರೇ ಇಲ್ಲ. ಇನ್ನಾದರೂ ಆ ರಸ್ತೆಯನ್ನು ಸರಿ ಮಾಡಿಸಬೇಕು ಎಂದು ಕೃಷ್ಣ ನಾಯಕ ಆಗ್ರಹಿಸಿದ್ದಾರೆ.