Sandalwood News: ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗಾಗಿ ನೂರಾರು ಮರಗಿಡ ಕಡಿದ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಎಚ್‌ಎಂಟಿ ಅರಣ್ಯ ಪ್ರದೇಶದಲ್ಲಿ ಟಾಕ್ಸಿಕ್ ತಂಡ ಚಿತ್ರೀಕರಣಕ್ಕೆ ಬೃಹತ್ ಸೆಟ್ ಹಾಕಿತ್ತು. ಸೆಟ್ ಹಾಕಬೇಕೆಂಬ ಕಾರಣಕ್ಕೆ, ಅಲ್ಲಿದ್ದ ನೂರಾರು ಮರಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಚಿತ್ರತಂಡದ ವಿರುದ್ಧ ಆರೋಪ ಬಂದಿದೆ.
ಸ್ಯಾಟ್‌ಲೈಟ್ ಫೋಟೋದಲ್ಲಿ ನೋಡಿದಾಗ, ಶೂಟಿಂಗ್‌ಗೆ ಸೆಟ್ ರೆಡಿಯಾಗುವ ಮುನ್ನ ಈ ಜಾಗದಲ್ಲಿ ಹೇರಳವಾಗಿ ಮರಗಿಡಗಳಿದ್ದವು. ಸೆಟ್ ನಿರ್ಮಾಣವಾದ ಬಳಿಕ ಸ್ಯಾಟ್‌ಲೈಟ್ ಫೋಟೋದಲ್ಲಿ ನೋಡಿದಾಗ, ಮರಗಿಡಗಳು ತೆರವು ಗೊಳಿಸಿದ ರೀತಿ ತೋರಿಸುತ್ತಿದೆ. ಹಾಗಾಗಿ ಮರ ಕಡಿಯಲು ಅವಕಾಶ ಮಾಡಿಕೊಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹವಾಗಿದೆ.
ಹಾಗಾಗಿ ಟಾಕ್ಸಿಕ್ ಟೀಮ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಪತ್ರ ಕೂಡ ಬರೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಾಕ್ಸಿಕ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾವಾಗಿದ್ದು, ಯಶ್ ಫ್ಯಾನ್ಸ್ ಸಿನಿಮಾಗಾಗಿ ವರ್ಷದಿಂದ ಕಾತುರರಾಗಿದ್ದಾರೆ. ಆದರೆ ಈ ರೀತಿ ಆರೋಪ ಬಂದಿದ್ದು, ಯಶ್ ಫ್ಯಾನ್ಸ್ ಆತಂಕಕ್ಕೀಡಾಗಿದ್ದಾರೆ.