Wednesday, December 18, 2024

Latest Posts

ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ನಟ ಅಕ್ಷಯ್ ಕುಮಾರ್ ಹೀಗೆ ಹೇಳಿದ್ದಾರೆ..

- Advertisement -

Health Tips: ನಟ ಅಕ್ಷಯ್ ಕುಮಾರ್ ವಯಸ್ಸು 50 ದಾಟಿದೆ. ಆದರೆ ಅವರು ಯಾವುದೇ ಆ್ಯಂಗಲ್‌ನಿಂದಲೂ ಆ ರೀತಿ ಕಾಣುವುದಿಲ್ಲ. ಏಕೆಂದರೆ ಅವರು ಅಷ್ಟು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ತಾವು ಯಾವ ರೀತಿ ಆರೋಗ್ಯದ ಬಗ್ಗೆ ಗಮನ ಹರಿಸುತ್ತೇನೆ ಅಂತ ಹೇಳಿದ್ದಾರೆ.

ಅಕ್ಷಯ್ ಕುಮಾರ್ ಹೇಳುವ ಪ್ರಕಾರ, ಅವರಿಗೆ ಯಾರಾದರೂ ನಿಮಗೆ ಕೋಟಿ ಕೋಟಿ ಸಂಭಾವನೆ ನೀಡುತ್ತೇನೆ, ತೂಕ ಹೆಚ್ಚಿಸಿಕೊಳ್ಳಿ ಎಂದು ಹೇಳಿದರೆ, ನಾನು ಯಾವುದೇ ಕಾರಣಕ್ಕೂ 5 ಕೆಜಿಗಿಂತ ಹೆಚ್ಚು ತೂಕ ಹೆಚ್ಚಿಸಿಕೊಳ್ಳುವುದೇ ಇಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಇನ್ನು ಯಾಕೆ ಅವರು ತೂಕ ಹೆಚ್ಚಿಸಿಕೊಳ್ಳುವುದಿಲ್ಲ ಎಂದರೆ, ತೂಕ ಹೆಚ್ಚಿಸಿಕೊಂಡರೆ, ಅದನ್ನು ಇಳಿಸಲು ಬಹಳ ಕಷ್ಟವಾಗುತ್ತದೆ. ಅಲ್ಲದೇ, ಆರೋಗ್ಯವೂ ಹಾಳಾಗುತ್ತದೆ. ಹಾಳಾಗಿರುವ ಆರೋಗ್ಯ ಇಟ್ಟುಕೊಂಡು, ಕೋಟಿ ಕೋಟಿ ಸಂಭಾವನೆ ಪಡೆದರೆ ಏನು ಉಪಯೋಗ ಎಂದಿದ್ದಾರೆ ಅಕ್ಷಯ್ ಕುಮಾರ್.

ಅಲ್ಲದೇ ಅಕ್ಷಯ್ ಕುಮಾರ್ ತಮ್ಮ ಜೀವನದಲ್ಲಿ ಎಂದಿಗೂ ಸೂರ್ಯೋದಯವಾದ ಬಳಿಕ ಎದ್ದೇ ಇಲ್ಲವಂತೆ, ಸದಾ ಸೂರ್ಯೋದಯಕ್ಕೂ ಮುನ್ನವೇ ಅವರು ನಿದ್ದೆಯಿಂದ ಏಳುತ್ತಾರಂತೆ. ಬಳಿಕ ಯೋಗ, ವ್ಯಾಯಾಮ ಮಾಡುತ್ತಾರಂತೆ. ಹೊಟ್ಟೆಯ ಸಮಸ್ಯೆ, ಬೊಜ್ಜಿನ ಸಮಸ್ಯೆ ಇದ್ದವರು, ಪ್ರತಿದಿನ ಒಂದು ಗಂಟೆ ವ್ಯಾಯಮ ಮಾಡಿದರೂ, ಅವರ ಆ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಅಂತಾರೆ ಅಕ್ಷಯ್.

ಅಕ್ಷಯ್ ಕುಮಾರ್ ಖತರೋಂಕೆ ಖಿಲಾಡಿ ಅನ್ನೋ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅದರಲ್ಲಿ ಬರುವ ಎಲ್ಲ ಕಠಿಣ ಟಾಸ್ಕ್‌ಗಳನ್ನು ಮಾಡುವ ತಾಕತ್ತು ಅಕ್ಷಯ್‌ಗೆ ಇತ್ತು. ಈ ಕಾರಣಕ್ಕಾಗಿಯೇ ಅವರನ್ನು ಆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು. ಅಕ್ಷಯ್ ಕುಮಾರ್ ವಿದೇಶದಲ್ಲಿ ವೇಟರ್ ಆಗಿ ಕಾರ್ಯ ಆರಂಭಿಸಿದ್ದು, ಬಳಿಕ ಭಾರತಕ್ಕೆ ಬಂದು, ನಟನೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಬಳಿಕ ಹಿಂದಿರುಗಿ ನೋಡದ ಮಟ್ಟಿಗೆ ಅವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ.

- Advertisement -

Latest Posts

Don't Miss