Sunday, February 9, 2025

Latest Posts

ನಟಿ ರಕ್ಷಿತಾ ಸಹೋದರ ರಾಣಾ ಆರತಕ್ಷತೆ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮನ

- Advertisement -

Sandalwood News: ನಟಿ ರಕ್ಷಿತಾಾ ಸಹೋದರ ರಾಣಾ ವಿವಾಹ ನೆರವೇರಿದ್ದು, ಇಂದು ಆರತಕ್ಷತೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಸಮೇತರಾಗಿ ಆಗಮಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಸಿಕ್ಕ ಬಳಿಕ ದರ್ಶನ್ ಮೊದಲ ಬಾರಿ ಈ ರೀತಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ್ ಜೊತೆ ದರ್ಶನ್ ಆಗಮಿಸಿದ್ದು, ಪ್ರೇಮ್, ರಕ್ಷಿತಾ ಇಬ್ಬರೂ ಸೇರಿ ದರ್ಶನ್‌ರನ್ನು ಸ್ವಾಗತಿಸಿದ್ದಾರೆ. ಅಲ್ಲದೇ ರಕ್ಷಿತಾ ಪ್ರೇಮ್ ಮಗ ಸೂರ್ಯ, ದರ್ಶನ್ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾನೆ.

ಇನ್ನು ರಾಣಾ ದಂಪತಿಗೆ ದರ್ಶನ್ ವಿಶ್ ಮಾಡಿದ್ದು, ಎಲ್ಲರೂ ಸೇರಿ ಫೋಟೋ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಹಲವು ನಟ ನಟಿಯರು ಆಗಮಿಸಿದ್ದರು. ನಟಿ ಜಯಮಾಲಾ ಪುತ್ರಿ ಆರತಕ್ಷತೆ ಕೂಡ ಇಂದೇ ನಡೆದಿದೆ.

- Advertisement -

Latest Posts

Don't Miss