Sunday, March 16, 2025

Latest Posts

Recipe: ರಾತ್ರಿ ಊಟಕ್ಕೆ ತಯಾರಿಸಬಹುದಾದ ಗೋಬಿ ಪರಾಠಾ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತುರಿದ ಕ್ವಾಲಿ ಫ್ಲವರ್, 2 ಕಪ್ ಗೋದಿ ಹಿಟ್ಟು, ಅರ್ಧ ಕಪ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಆಮ್‌ಚೂರ್ ಪುಡಿ,  ಉಪ್ಪು, ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್, ಕೊತ್ತೊಂಬರಿ ಸೊಪ್ಪು, ವೋಮ, ಎಣ್ಣೆ, ತುಪ್ಪ.

ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಉಪ್ಪು, ವೋಮ, ಬಿಸಿ ನೀರು ಎಣ್ಣೆ ಅಥವಾ ತುಪ್ಪ ಮಿಕ್ಸ್ ಮಾಡಿ, ಚಪಾತಿ ಹಿಟ್ಟು ಕಲಿಸಿಕೊಳ್ಳಿ. ಬಳಿಕ ಮತ್ತೊಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು, ಅದರಲ್ಲಿ ತುರಿದ ಗೋಬಿ, ಖಾರದ ಪುಡಿ, ಗರಂ ಮಸಾಲೆ, ಆಮ್‌ಚೂರ್ ಪುಡಿ, ಉಪ್ಪು ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನ ಪೇಸ್ಟ್, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.

ಬಳಿಕ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ಹೋಳಿಗೆಗೆ ಹೂರಣ ತುಂಬಿಸಿದ ಹಾಗೆ ಗೋಬಿ ಹೂರಣ ತುಂಬಿಸಿ, ತುಪ್ಪ ಬಳಸಿ, ಗೋಬಿ ಪರಾಠಾ ಮಾಡಿ. ಕಾಯಿ ಚಟ್ನಿಯೊಂದಿಗೆ ಗೋಬಿ ಪರಾಠಾ ಸವಿಯಲು ಚೆನ್ನಾಗಿರುತ್ತದೆ.

- Advertisement -

Latest Posts

Don't Miss