Wednesday, April 24, 2024

Latest Posts

ಚಿಕಿತ್ಸೆ ಫಲಿಸದೇ ನಟ, ಅಧಿಕಾರಿ ಕೆ.ಶಿವರಾಮ್ ನಿಧನ: ಗಣ್ಯರ ಸಂತಾಪ

- Advertisement -

Movie News: ನಟ, ಅಧಿಕಾರಿ ಮತ್ತು ರಾಜಕಾರಣಿ ಕೆ.ಶಿವರಾಮ್ ಹೃದಯಾಘಾತವಾಗಿ, 12 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು ಚಿಕಿತ್ಸೆ ಫಲಿಸದೇ, ಶಿವರಾಮ್(71) ನಿಧನರಾಗಿದ್ದಾರೆ.

ಶಿವರಾಮ್‌ ಅವರಿಗೆ 12 ದಿನಗಳ ಹಿಂದೆ ತೀವ್ರ ಹೃದಯಾಘಾತವಾಗಿದೆ. ಅಂದಿನಿಂದ ನಿನ್ನೆವರೆಗೂ ಶಿವರಾಮ್ ಅವರನ್ನು ಐಸಿಯುನಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬೆಂಗಳೂರಿನ ಸಂಪಂಗಿರಾಮನಗರದ ಎಚ್‌.ಜೆ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು ಶಿವರಾಮ್ ನಿಧನರಾಗಿದ್ದಾರೆ.

ಶಿವರಾಮ್ ಅವರು ಟೈಗರ್, ಯಾರಿಗೆ ಬೇಡ ದುಡ್ಡು, ಬಾ ನಲ್ಲೆ ಮಧುಚಂದ್ರಕೆ ಸೇರಿ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಐಎಎಸ್ ಅಧಿಕಾರಿ ಆಗಿದ್ದವರು. ರಾಜಕಾರಣದಲ್ಲಿ ತೊಡಗಿದ್ದ ಶಿವರಾಮ್, ಬಿಜೆಪಿ ಪಕ್ಷದಲ್ಲಿದ್ದರು.

ಸಂಸದ ಪ್ರತಾಪ್ ಸಿಂಹ, ಪ್ರೀತಂಗೌಡ, ಸಚಿವ ಎನ್.ಚೆಲುವರಾಯಸ್ವಾಮಿ, ಸಿ.ಟಿ.ರವಿ ಸೇರಿ, ಹಲವು ಗಣ್ಯರು, ಶಿವರಾಮ್ ನಿಧನದ ಬಗ್ಗೆ ಸಂತಾಾಪ ಸೂಚಿಸಿದ್ದಾರೆ.

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

- Advertisement -

Latest Posts

Don't Miss