Saturday, July 27, 2024

Latest Posts

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

- Advertisement -

Movie News: ನಟಿ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ನಮೃತಾ ಗೌಡ ಜೊತೆ ಮಧುಮಗನ ಡ್ರೆಸ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ ಟೆನ್ ವಿನ್ನರ್ ಕಾರ್ತಿಕ್ ಮಹೇಶ್ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಹಲವರು ಇವರದ್ದು ಮದುವೆ ಆಯಿತು ಅಂತಲೇ ಭಾವಿಸಿದ್ದಾರೆ. ಆದರೆ ಸತ್ಯ ಬೇರೆಯದ್ದೇ ಇದೆ.

ಬಿಗ್‌ಬಾಸ್‌ನಲ್ಲಿದ್ದಾಗ, ಕಾರ್ತಿಕ್ ಸಂಗೀತಾ ಜೊತೆ ಜಗಳವಾದ ಬಳಿಕ, ನಮೃತಾ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಎಷ್ಟೋ ಜನ ಕಾರ್ತಿಕ್ ನಮೃತಾ ಜೋಡಿ ಚೆನ್ನಾಗಿದೆ. ಅವರ ನಡುವೆ ಲವ್ ಆಗಿದೆ ಅಂತೆಲ್ಲ ಮಾತನಾಡಿದ್ದರು. ಅದಕ್ಕೆ ತಕ್ಕಂತೆ, ಇದೀಗ ನಮೃತಾ ಮತ್ತು ಕಾರ್ತಿಕ್ ಮಧು ಮಕ್ಕಳ ಡ್ರೆಸ್‌ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಜನರ ತಪ್ಪು ತಿಳುವಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕಾರ್ತಿಕ್ ಮಹೇಶ್, ಸಿಂಗಲ್ ಫೋಟೋ ಇರುವ ವೀಡಿಯೋ ಹಾಕಿ, ಅದಕ್ಕೆ ನೀನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡು ಹಾಕಿದ್ದಾರೆ. ಜೊತೆಗೆ ನಾನಲ್ಲಾ ನಾನಲ್ಲಾ ಕರಿಮಣಿ ಮಾಲೀಕ ನಾನಲ್ಲಾ ಅಂತಲೂ ಹಾಕಿದ್ದಾರೆ. ಅಂದ್ರೆ ನಾನು ಮತ್ತು ನಮೃತಾ ಮದುವೆಯಾಗಿಲ್ಲವೆಂದು ಕಾರ್ತಿಕ್ ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಗಾದ್ರೆ ಮತ್ಯಾಕೆ ಇವರಿಬ್ಬರು ಮಧುಮಕ್ಕಳಂತೆ ಮಿಂಚಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಬಿಗ್‌ಬಾಸ್ ಬಳಿಕ ಇವರಿಗೆ ಸಿಕ್ಕಾಪಟ್ಟೆ ಆಫರ್ಸ್ ಬರ್ತಿದೆ. ಸಿನಿಮಾ, ಸಿರಿಯಲ್, ರಿಯಾಲಿಟಿ ಶೋ, ಆ್ಯಡ್ಸ್ ಹೀಗೆ ಹಲವು ಆಫರ್ಸ್ ಬರುತ್ತಿದೆ. ಅದರಲ್ಲಿ ಆಭರಣೆ ಸಂಬಂಧಿಸಿದ ಆ್ಯಡ್‌ನಲ್ಲಿ ನಮೃತಾ ಮತ್ತು ಕಾರ್ತಿಕ್ ನಟಿಸಿದ್ದಾರೆ. ಹೀಗಾಗಿಯೇ ಇವರಿಬ್ಬರು ಮಧುಮಕ್ಕಳಂತೆ ಮಿಂಚಿದ್ದಾರೆ. ಆ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಯಪ್ರದಾಗೆ ಬಂಧನದ ಭೀತಿ.. ತಲೆಮರೆಸಿಕೊಂಡ್ರಾ ನಟಿ..?

ರಿಯಾಲಿಟಿ ಶೋನಲ್ಲಿ ನಿರೂಪಕನಿಗೆ ಹೊಡೆದ ಗಾಯಕಿ.. ಕಾರಣವೇನು..?

ಗಾಯಕ ಬಂಟಿ ಮೇಲೆ ಗುಂಡಿನ ದಾಳಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

- Advertisement -

Latest Posts

Don't Miss