Maha Kumbh mela: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಸೆಲೆಬ್ರಿಟಿಗಳು, ಸಾಮಾನ್ಯ ಜನರು, ಹೀಗೆ ಹಲವರು ಕುಂಭ ಮೇಳಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಮುಳುಗೇಳುತ್ತಿದ್ದಾರೆ.
ಇನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಸಿಕ್ಕ ಸೆಲೆಬ್ರಿಟಿಗಳು, ರಾಜಕಾರಣಗಳೆಲ್ಲ ಕುಂಬ ಮೇಳಕ್ಕೆ ಬಂದರು ಅನ್ನೋ ರೀತಿ ಸುದ್ದಿ, ಫೋಟೋ, ವೀಡಿಯೋ ನೋಡುತ್ತಿದ್ದೀರಿ. ಆದರೆ ಅವೆಲ್ಲವೂ ಸತ್ಯವಲ್ಲ. ಬದಲಾಗಿ ಎಐ ಆ್ಯಪ್ ಬಳಸಿ ರಚಿಸಿರುವ ಫೋಟೋಗಳು. ಅಂಥದ್ದೇ ಒಂದು ಫೋಟೋವನ್ನು ರಚಿಸಿ, ಪ್ರಶಾಂತ್ ಸಂಬರ್ಗಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಾರಣ, ನಟ ಪ್ರಕಾಶ್ ರಾಜ್, ಸಂಬರ್ಗಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರಕಾಶ್ ರಾಜ್ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಶಾಂತ್ ಸಂಬರ್ಗಿ, ಪ್ರಕಾಶ್ ರಾಜ್ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಂತೆ ಫೋಟೋ ಹರಿಬಿಟ್ಟಿದ್ದರು. ಈ ಕಾರಣಕ್ಕೆ, ಪ್ರಕಾಶ್ ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ಸಂಬರ್ಗಿ, ಪ್ರಕಾಶ್ ರಾಜ್ ಕುಂಭ ಮೇಳಕ್ಕೆ ಹೋಗಿಲ್ಲ ಅನ್ನೋ ಸಂತೋಷ. ಆದರೆ ನನಗೆ ಆ ಫೋಟೋ ವಾಟ್ಸಪ್‌ನಲ್ಲಿ ಬಂದಿತ್ತು. ನಾನು ಅದನ್ನು ಸತ್ಯ ಎಂದು ತಿಳಿದು, ಪ್ರಕಾಶ್ ರಾಜ್ ಕೂಡ ಕುಂಭ ಮೇಳಕ್ಕೆ ಹೋಗಿದ್ದಾರಲ್ಲಾ ಅಂತಾ ಆಶ್ಚರ್ಯಚಕಿತನಾಗಿ ಹಾಕಿದ್ದೆ. ನನ್ನ ವಿರುದ್ಧ ನೀಡಿರುವ ಹಿಂದೆ ಷಡ್ಯಂತ್ರವಿದೆ ಅಂತಾ ನನಗೆ ಗೊತ್ತು. ಏಕೆಂದರೆ, ಹಲವರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನನ್ನ ವಿರುದ್ಧವಷ್ಟೇ ದೂರು ದಾಖಲಿಸಲಾಗಿದೆ. ನಾನು ಕೂಡ ಇದನ್ನು ಲೀಗಲ್ ಆಗಿ ಫೇಸ್ ಮಾಡುತ್ತೇನೆ ಎಂದರು.