Health Tips: ಹೆಣ್ಣು ಮಕ್ಕಳಿಗೆ ಪ್ರತೀ ತಿಂಗಳು ಬರುವ ಮುಟ್ಟು ಅದೆಷ್ಟು ಜೀವ ಹಿಂಡುತ್ತದೆ ಎಂದು, ಅದನ್ನು ಅನುಭವಿಸುವವರಿಗಷ್ಟೇ ಗೊತ್ತಿರುತ್ತದೆ. ಆದರೆ ಆ ಹೊಟ್ಟೆ ನೋವನ್ನು ಶಮನ ಮಾಡುವ ಕೆಲ ಉಪಾಯಗಳನ್ನು ಕೂಡ ನಾವು ಫಾಲೋ ಮಾಡಬೇಕಾಗುತ್ತದೆ. ಅಂಥ ಉಪಾಯಗಳಲ್ಲಿ ನಾವು ಸೇವಿಸುವ ಆಹಾರ ಕೂಡ ಒಂದು. ನಾವು ಆ ಸಮಯದಲ್ಲಿ ತಂಪಾದ ಆಹಾರ ಸೇವನೆ ಮಾಡಬೇಕು. ಅದರಲ್ಲೂ ಹಣ್ಣಿನ ಸೇವನೆ ಮಾಡಲೇಬೇಕು. ಹಾಗಾಗಿ ನಾಾವಿಂದು ಪಿರಿಯಡ್ಸ್ ಸಮಯದಲ್ಲಿ ತಿನ್ನಬೇಕಾದ ಹಣ್ಣುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಾಳೆಹಣ್ಣು. ದೇಹಕ್ಕೆ ತಂಪು ನೀಡುವ ಬಾಳೆಹಣ್ಣಿನಲ್ಲಿ ಪೋಟ್ಯಾಷಿಯಂ, ಮ್ಯಾಗ್ನಿಷಿಯಮ್ ಮತ್ತು ವಿಟಾಮಿನ್ ಬಿ6 ನಿಂದ ಭರಪೂರವಾಗಿರುತ್ತದೆ. ಮುಟ್ಟಿನ ಸಮಯದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗುವುದರ ಜೊತೆಗೆ, ಜೀರ್ಣಕ್ರಿಯೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಲವಿಸರ್ಜನೆ ಸರಿಯಾಗಿ ಆಗಬೇಕು ಅಂದ್ರೆ ಬಾಳೆಹಣ್ಣಿನ ಸೇವನೆ ಮಾಡಬೇಕು. ಅಲ್ಲದೇ, ದೇಹದಲ್ಲಿ ಶಕ್ತಿ ಬರಲು, ಆಯಾಸ ಹೋಗಲು ಬಾಳೆಹಣ್ಣಿನ ಸೇವನೆ ಅತ್ಯಗತ್ಯವಾಗಿರುತ್ತದೆ.
ಪಪ್ಪಾಯಿ ಹಣ್ಣು. ಬೇಗ ಮುಟ್ಟಾಗಬೇಕು ಅಂದ್ರೆ ಪಪ್ಪಾಯಿ ಹಣ್ಣಿನ ಸೇವನೆ ಮಾಡಬೇಕು ಎನ್ನುತ್ತಾರೆ. ಆದರೆ ನೀವು ಮುಟ್ಟಾದ ಬಳಿಕ ಪಪ್ಪಾಯಿ ಹಣ್ಣಿನ ಸೇವನೆ ಮಾಡಿದರೂ ಉತ್ತಮ. ಆದರೆ ಹಣ್ಣಿನ ಸೇವನೆಯ ಪ್ರಮಾಣ ಮಾತ್ರ ಸ್ವಲ್ಪ ಕಡಿಮೆ ಇರಲಿ. ವಿಟಾಮಿನ್ ಸಿನಿಂದ ಭರಪೂರವಾಗಿರುವ ಪಪ್ಪಾಯಿ ಹಣ್ಣಿನ ಸೇವನೆಯಿಂದ ಹೊಟ್ಟೆ ನೋವಿನ ಪ್ರಮಾಣ ಕಡಿಮೆಯಾಗುತ್ತದೆ.
ಕಿತ್ತಳೆ ಹಣ್ಣು. ಕಿತ್ತಳೆ ಹಣ್ಣನ್ನು ಮುಟ್ಟಿನ ಸಮಯದಲ್ಲಿ ನೀವು ಸೇವಿಸಿದರೆ, ಕೆಲ ನಿಮಿಷಗಳಲ್ಲೇ ನಿಮ್ಮ ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಮುಟ್ಟಿನ ಹೊಟ್ಟೆ ನೋವಿರುವ ದಿನ ನೀವು 2ರಿಂದ 3 ಕಿತ್ತಳೆ ಹಣ್ಣಿನ ಸೇವನೆ ಮಾಡಿದರೂ ನಡೆಯುತ್ತದೆ. ಇದು ದೇಹಕ್ಕೆ ಶಕ್ತಿ ಕೊಡುವುದಲ್ಲದೇ, ದೇಹಕ್ಕೆ ತಂಪು ನೀಡುತ್ತದೆ. ಹೊಟ್ಟೆ ನೋವನ್ನೂ ಕಡಿಮೆ ಮಾಡುತ್ತದೆ.