Monday, December 23, 2024

Latest Posts

ಪುತ್ರನಿಗಾಗಿ ಮತ್ತೆ ಡೈರೆಕ್ಟರ್ ಆಗಲಿರುವ ನಟ ರವಿಶಂಕರ್…!

- Advertisement -

www.karnatakatv.net:ಬೆಂಗಳೂರು:ಬಹುಭಾಷಾ ನಟ ರವಿಶಂಕರ್ ಡಬ್ಬಿಂಗ್, ನಟನೆ, ಸಂಗೀತ ಮಾತ್ರವಲ್ಲದೆ ಡೈರೆಕ್ಷನ್ ನಲ್ಲೂ ಸೈ ಎನಿಸಿಕೊಂಡಿರೋ ಪ್ರತಿಭಾವಂತ ಕಲಾವಿದ. ಈ ಹಿಂದೆ ಕನಸಿನ ರಾಣಿ ಮಾಲಾಶ್ರೀ ನಟನೆಯ 2004ರಲ್ಲಿ ತೆರೆಕಂಡ ಹಿಟ್ ಚಿತ್ರ ‘ದುರ್ಗಿ’ ಸಿನಿಮಾ ನಿರ್ದೇಶಿಸಿದ್ದ ರವಿಶಂಕರ್, ಇದೀಗ ಮತ್ತೆ ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಹೌದು. ಬರೋಬ್ಬರಿ 17 ವರ್ಷಗಳ ನಂತರ ಡೈರೆಕ್ಷೆನ್ ಮಾಡಲು ಮುಂದಾಗಿದ್ದು, ಈ ಚಿತ್ರದ ಮೂಲಕ ತಮ್ಮ ಪುತ್ರ ಅದ್ವೈಯ್ ಶಂಕರ್‌ ರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಲವು ದಿನಗಳ ಮುನ್ನವೆ ಈ ವಿಷಯವನ್ನು ಹಂಚಿಕೊಂಡಿದ್ದ ರವಿಶಂಕರ್, ಕೊರೋನಾದಿಂದಾಗಿ ಚಿತ್ರದ ಕೆಲಸಗಳು ತಡವಾಗಿತ್ತು. ಆದರೆ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಈ ಚಿತ್ರದ ಕೆಲಸ ಶುರುಮಾಡುವುದಾಗಿ ರವಿಶಂಕರ್ ತಿಳಿಸಿದ್ದಾರೆ. ಇದು ಅದ್ವೈಯ್ ಮೊದಲ ಸಿನಿಮಾವಾಗಿದ್ದು, ಪಕ್ಕಾ ಲವ್ ಸ್ಟೋರಿ ಆಧಾರಿತ ಅದ್ದೂರಿ ಚಿತ್ರ ಇದಾಗಲಿದೆ ಅಂತ ರವಿಶಂಕರ್ ಮಾಹಿತಿ ನೀಡಿದ್ದಾರೆ.

ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss