ಮೈಸೂರು: ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಗೆ ಅವರದ್ದೇ ಆದ ಸಿದ್ಧಾಂತಗಳಿವೆ, ವರ್ಚಸ್ಸಿದೆ. ಹೀಗಾಗಿ ಅವರಿಗೂ ನಮಗೂ ಹೋಲಿಕೆ ಮಾಡಬಾರದು ಅಂತ ನಟ ಉಪೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ನಟ ಉಪೇಂದ್ರ ಲೋಕಸಭೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಸುಮಲತಾರ ಕೈಹಿಡದ ಜನ, ಪ್ರಜಾಕೀಯವನ್ನ ಯಾಕೆ ಒಪ್ಪಿಕೊಳ್ಳಲಿಲ್ಲವೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ರು. ಸುಮಲತಾರಿಗೆ ಅವರದ್ದೇ ಆದ ಸಿದ್ದಾಂತಗಳಿವೆ, ವರ್ಚಸ್ಸಿದೆ ಹೀಗಾಗಿ ಅವರಿಗೂ ನಮಗೆ ಹೋಲಿಕೆ ಮಾಡಬಾರದು ಅಂತ ಹೇಳಿದ್ರು. ಅಲ್ಲದೆ ಯಾವುದೇ ವ್ಯಕ್ತಿ ಅಥವಾ ಪಕ್ಷಕ್ಕೆ ಮನ್ನಣೆ ಸಿಗುವಂತಾಗಬಾರದು. ಒಳ್ಳೆಯ ವಿಚಾರಗಳಿಗೆ ಎಂದೂ ಮನ್ನಣೆ ಸಿಗಬೇಕು ಅಂತ ಸುಮಲತಾರನ್ನು ಹೊಗಳಿದ್ರು.
ಇನ್ನು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಖಂಡಿತವಾಗಿಯೂ ಸ್ಪರ್ಧೆ ಮಾಡೋದಾಗಿ ಉಪೇಂದ್ರ ಇದೇ ವೇಳೆ ಹೇಳಿದ್ರು.
ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನ್ ಕೊಡ್ತಾರೆ ನಿರ್ಮಲಾ ಮೇಡಂ..?? ಮಿಸ್ ಮಾಡದೇ ಈ ವಿಡಿಯೋ ನೋಡಿ