Movie News: ನಟ ವಿಜಯ್ ದೇವರಕೊಂಡಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ, ಅರ್ಜುನ್ ರೆಡ್ಡಿ ಮೂವಿಗಿಂತ ಮುನ್ನ ವಿಜಯ್ ಸಣ್ಣ ನಟನಾಗಿದ್ದರು. ಅರ್ಜುನ್ ರೆಡ್ಡಿ ಮೂವಿಯಲ್ಲಿ ನಟಿಸದ ಬಳಿಕ, ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂಥ ನಟನಾಗಿ ಹೊರಹೊಮ್ಮಿದರು.
ಇನ್ನು ವಿಜಯ್ ದೇವರಕೊಂಡಗೆ ಫಿಮೇಲ್ ಫ್ಯಾನ್ ಫಾಲೋವರ್ಸ್ ಹೆಚ್ಚು ಅಂತ ಹೇಳಬಹುದು. ಇದೀಗ ವಿಷಯ ಏನಂದ್ರೆ, ಇಬ್ಬರು ವಿದ್ಯಾರ್ಥಿನಿಯರು ರೀಲ್ಸ್ ಮಾಡಿ, ಈ ರೀಲ್ಸ್‌ಗೆ ವಿಜಯ್ ದೇವರಕೊಂಡ ಕಾಮೆಂಟ್ ಮಾಡಿದರಷ್ಟೇ ನಾವು ನಮ್ಮ ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದಿದ್ದಾರೆ.
ಈ ವೀಡಿಯೋ ನೋಡಿದವರು, ನಿಮಗೇನು ಹುಚ್ಚಾ..? ನಿಮ್ಮಂಥರ ವೀಡಿಯೋಗೆಲ್ಲ ಕಾಮೆಂಟ್ ಮಾಡುವಷ್ಟು ವಿಜಯ್ ಫ್ರೀ ಇರ್ತಾರೆ ಅಂತಾ ತಿಳ್ಕೊಂಡಿದ್ದೀರಾ..? ಚಾನ್ಸೇ್ ಇಲ್ಲಾ ಎಂದಿದ್ದಾರೆ. ಇನ್ನು ಕೆಲವರು ವಿಜಯ್ ಕಾಮೆಂಟ್ ಮಾಡುವಷ್ಟು ನಿಮ್ಮ ರೀಲ್ಸ್ ಬೊಂಬಾಟ್ ಆಗಿದೆಯಾ ಅಂತಾ ಪ್ರಶ್ನಿಸಿದ್ದಾರೆ. ಹಲವರು ವಿಜಯ್ ಕಾಮೆಂಟ್ ಬರೋದಿಲ್ಲ ಅನ್ನೋ ರೀತಿಯೇ ಕಾಮೆಂಟ್ ಮಾಡಿದ್ದಾರೆ.
ಆದರೆ ಅಚ್ಚರಿ ಏನಂದ್ರೆ, ವಿಜಯ್ ದೇವರಕೊಂಡ ಈ ರೀಲ್ಸ್‌ಗೆ ಕಾಮೆಂಟ್ ಮಾಡಿದ್ದಾರೆ. ನೀವು ಪರೀಕ್ಷೆಯಲ್ಲಿ 90% ಅಂಕ ಗಳಿಸಿ, ನಾನು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದಿದ್ದಾರೆ. ವಿಜಯ್ ಮಾಡಿದ ಕಾಮೆಂಟ್ ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ವಿಜಯ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ವಿಜಯ್‌ಗೆ ಫ್ಯಾನ್ಸ್ ಹೆಚ್ಚಾಗಿದ್ದಾರೆ. ಈಗ ರೀಲ್ಸ್ ಮಾಡಿದ ಹುಡುಗಿಯರು 90% ಅಂಕ ಗಳಿಸಿ, ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರಾ ಅಂತಾ ಕಾದು ನೋಡಬೇಕಿದೆ.
ಈ ಷರತ್ತು ಒಪ್ಪಿದರೆ ಮಾತ್ರ, ಇಂಡಿಯಾ ಕೂಟದೊಟ್ಟಿಗೆ ಹೊಂದಾಣಿಕೆ: ಸಮಾಜವಾದಿ ಪಾರ್ಟಿ
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ರಾಜಸ್ಥಾನ ಬುಡಕಟ್ಟು ಮುಖಂಡ ಮಹೇಂದ್ರ ಜೀತ್