Sunday, September 15, 2024

Latest Posts

ಕೊನೆಗೂ ಲಕ್ಕಿ ಮನೆ ಖಾಲಿ ಮಾಡಿದ ರಾಕಿ ಭಾಯ್…!

- Advertisement -

ಬೆಂಗಳೂರು: ಕೊನೆಗೂ ರಾಕಿಂಗ್ ಸ್ಟಾರ್ ಯಶ್ ತಮ್ಮ ಅದೃಷ್ಟದ ಮನೆಯನ್ನು ಖಾಲಿ ಮಾಡಿದ್ದಾರೆ. ಇಂದು ಅಧಿಕೃತವಾಗಿ ತಮ್ಮ ಮನೆಯ ಕೀಲಿಯನ್ನು ಮಾಲೀಕರಿಗೆ ಯಶ್ ಒಪ್ಪಿಸಿದ್ದು ವಿವಾದಕ್ಕೆ ತೆರೆ ಬಿದ್ದಿದೆ. 2ತಿಂಗಳ  ಬಾಕಿ ಬಾಡಿಗೆ 80ಸಾವಿರ ರೂಪಾಯಿ ಡಿಡಿಯನ್ನೂ ಮನೆ ಮಾಲೀಕರಿಗೆ ಪಾವತಿಸಿದ್ದಾರೆ. 2013ರರಿಂದಲೂ ಮನೆ ಬಾಡಿಗೆ ವಿಚಾರವಾಗಿ ಕಾನೂನು ಹೋರಾಟ ನಡೆಸಿದ್ದ ಮನೆ ಮಾಲೀಕರು ಕೊನೆಗೂ ಮನೆ ಖಾಲಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

2010 ರ ಅಕ್ಟೋಬರ್ 16ರಿಂದ ಬನಶಂಕರಿಯ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಬಾಡಿಗೆಗಿರುವ ಯಶ್ ಕುಟುಂಬ ಸಮಯಕ್ಕೆ ಸರಿಯಾಗಿ ಮನೆ ಬಾಡಿಗೆ ನೀಡದೆ ಬೆದರಿಕೆ ಹಾಕುತ್ತಿದ್ದಾರೆ ಅಂತ ಮನೆ ಮಾಲೀಕ ಮುನಿಪ್ರಸಾದ್ ಆರೋಪಿಸಿ ಗಿರಿನಗರ ಠಾಣೆ ಮೆಟ್ಟಿಲೇರಿದ್ದರು.

5 ಬೆಡ್ ರೂಮ್, ಡೈನಿಂಗ್ ಹಾಲ್,ಒಂದು ಹಾಲ್, ಅಡುಗೆ ಕೋಣೆ, ದೇವರ ಕೋಣೆ ಇರೋ ಈ ಬಾಡಿಗೆ ಮನೆ ತಮಗೆ ತುಂಬಾ ಲಕ್ಕಿ, ಹೀಗಾಗಿ ನಾನು ಖಾಲಿ ಮಾಡೋದಿಲ್ಲ ಅಂತ ನಟ ಯಶ್ ಹೇಳಿದ್ರು. ಮಾಲೀಕರ ಒಪ್ಪಿಗೆ ಪಡೆದು 40 ಲಕ್ಷ ರೂಪಾಯಿ ಖರ್ಚು ಮಾಡಿ ಯಶ್ ಇಂಟೀರಿಯರ್ ಡಿಸೈನ್ ಕೂಡ ಮಾಡಿಸಿದ್ರು. ಮೊದಲು ಮಾರಾಟ ಮಾಡೋಕೆ ಒಪ್ಪಿಕೊಂಡು ನಂತರ ಮನೆ ಮಾರಾಟ ಮಾಡಲ್ಲ ಅಂತ ಮಾಲೀಕರು ಹೇಳಿದ್ರು ಅನ್ನೋದು ಯಶ್ ಕುಟುಂಬದ ಆರೋಪವಾಗಿತ್ತು. ಯಶ್ ಸ್ಟಾರ್ ಆದ ಬಳಿಕ ಈ ಮನೆಯಿಂದ ಬೇರೊಂದು ಮನೆಗೆ ಯಶ್ ಕುಟುಂಬ ಶಿಫ್ಟ್ ಆಯಿತು. ಆದ್ರೂ ಸಹ ಇದು ತಮ್ಮ ಪಾಲಿನ ಅದೃಷ್ಟದ ಮನೆ ಅಂತ ಯಶ್ ಕತ್ರಿಗುಪ್ಪೆಯ ಈ ಮನೆಯನ್ನು ಬಿಟ್ಟುಕೊಡದೆ ತಮ್ಮ ಕಚೇರಿಯನ್ನಾಗಿ ಮಾರ್ಪಾಡು ಮಾಡಿಕೊಂಡಿದ್ರು.

ಕೋರ್ಟ್ ಆದೇಶದಂತೆ ಮೇ 31ರೊಳಗೆ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಇನ್ನೂ ಮನೆ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ  ಮನೆ ಮಾಲೀಕರು ಹಿರಿಯ ವಕೀಲ ಎಂ.ಟಿ.ನಾಣಯ್ಯ ಮೂಲಕ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಸಜ್ಜಾಗಿದ್ದರು. ಹೀಗಾಗಿ ಯಶ್ ಮಾಲೀಕರಿಗೆ ಮನೆ ಕೀಲಿ ಕೈ ಕೊಟ್ಟು ಮನೆ ಖಾಲಿ ಮಾಡಿ  ವಿವಾದಕ್ಕೆ ತೆರೆ ಎಳೆದಿದ್ದಾರೆ.

ನನ್ನ ಗೆಳತಿ ವರ್ಸಸ್ ನನ್ನ ಗೆಳೆಯ ಸಾಂಗ್- ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=dsTdPSTz5vU
- Advertisement -

Latest Posts

Don't Miss