ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾದ ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ್

Bollywood News: ಬಾಲಿವುಡ್ ಬೆಡಗಿ ಅದಿತಿ ರಾವ್ ಹೈದರಿ ಮತ್ತು ಸೌತ್ ನಟ ಸಿದ್ಧಾರ್ಥ ಗುಟ್ಟಾಗಿ, ತೆಲಂಗಾಣಾದ ದೇವಸ್ಥಾನವೊಂದರಲ್ಲಿ, ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಸಿದ್ಧಾರ್ಥ ಮತ್ತು ಅದಿತಿಗೆ ಇದು ಎರಡನೇಯ ವಿವಾಹವಾಗಿದ್ದು, ಇವರಿಬ್ಬರರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಲೀವ್ ಇನ್ ರಿಲೆಶನ್‌ಶಿಪ್‌ನಲ್ಲಿದ್ದರು. 2021ರಲ್ಲಿ ಮಹಾಸಮುದ್ರಂ ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಇವರಿಬ್ಬರು ಗುಟ್ಟಾಗಿ ವಿವಾಹವಾಗಿದ್ದಾರೆ.

ಸಿದ್ಧಾರ್ಥ 2003ರಲ್ಲಿ ಗೆಳತಿ ಮೇಘನಾ ಜೊತೆ ಮದುವೆಯಾಗಿದ್ದರು. ಬಳಿಕ ಸಿದ್ಧಾರ್ಥ್ ಕಮಲ್ ಹಾಸನ್ ಮಗಳು ಶೃತಿ ಹಾಸನ್ ಜೊತೆ ಅಫೇರ್ ಇದೆ ಎಂಬ ಸುದ್ದಿ ಹರಿದಾಡಿತ್ತು. ಬಳಿಕ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಮೇಘನಾ ಜೊತೆ ಕೂಡ ಸಿದ್ಧಾರ್ಥ್ ಡಿವೋರ್ಸ್‌ ಪಡೆದುಕೊಂಡರು. ಇನ್ನು ಅದಿತಿ ಕೂಡ ವಕೀಲ ಸತ್ಯದೀಪ್‌ ಮಿಶ್ರಾ ಜೊತೆ ವಿವಾಹವಾಗಿದ್ದರು. ಇವರ ವೈವಾಹಿಕ ಜೀವನ ಸರಿ ಇಲ್ಲದ ಕಾರಣ, ಇವರು ಕೂಡ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ವಿವಾಹವಾಾಗಿದ್ದಾರೆ.

ಹುಟ್ಟುಹಬ್ಬದ ದಿನ ಪತ್ನಿ, ಮಗುವಿನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಟ ರಾಮ್‌ ಚರಣ್

ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಳಗಾವಿಯಲ್ಲಿ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿ ಕ್ಯಾಂಪೇನ್

About The Author