Movie News: ಭೋಜ್ಪುರಿ ನಟಿ ಅಂಚಲ್ ತಿವಾರಿ ಮತ್ತು ಗಾಯಕ ಛೋಟು ಪಾಂಡೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪಂಚಾಯತ್ 2 ಚಿತ್ರದ ಮೂಲಕ ಫೇಮಸ್ ಆಗಿದ್ದ ಆಂಚಲ್, ಚಿಕ್ಕ ವಯಸ್ಸಿಗೆ ನಿಧನರಾಗಿದ್ದಾರೆ.
ಬಿಹಾರದ ದೇವಕಲಿ ಎಂಬ ಗ್ರಾಮದ ಬಳಿ ಈ ರಸ್ತೆ ಅಪಘಾತವಾಗಿದ್ದು, ನಟಿ, ಗಾಯಕಿ ಚಲಿಸುತ್ತಿದ್ದ ಕಾರ್ ಮತ್ತು ಬೈಕ್ ನಡುವೆ ಅಪಘಾತವಾಗಿದೆ. ಹಿಂದಿನಿಂದ ಲಾರಿ ಬಂದು ಕಾರ್‌ಗೆ ಗುದ್ದಿದ್ದು, ಕಾರ್ ಬೈಕ್‌ಗೆ ಗುದ್ದಿದೆ. ಘಟನೆ ವೇಳೆ ವಾಹನದಲ್ಲಿ ನಟಿ ಆಂಚಲ್ ಮತ್ತು ಗಾಕ ಛೋಟು ಸೇರಿ ಅವರ ಕೆಲವು ಸ್ನೇಹಿತರಿದ್ದರು. ಇವರೆಲ್ಲರೂ ಗಾಯಗೊಂಡಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಆಂಚಲ್ ಮತ್ತು ಛೋಟು ಸಾವನ್ನಪ್ಪಿದ್ದಾರೆ.
ಇವರೊಂದಿಗೆ ಇನ್ನು ಕೆಲವರು ಸಾವನ್ನಪ್ಪಿದ್ದಾರೆ. ನಟಿ ಮತ್ತು ಗಾಯಕನ ಸಾವಿಗೆ ಭೋಜ್ಪುರಿ ಚಿತ್ರರಂಗ ಸಂತಾಪ ಸೂಚಿಸಿದೆ.




