Wednesday, February 5, 2025

Latest Posts

ನಟಿಯ ಮಾವನಿಗೆ 27 ಕೋಟಿ ರೂಪಾಯಿ ವಂಚನೆ, ಆರೋಪಿ ಬಂಧನ..

- Advertisement -

ಬಾಲಿವುಡ್ ನಟಿ ಸೋನಂ ಕಪೂರ್ ಮಾವ ಹರೀಶ್ ಅಹುಜಾರಿಗೆ 27 ಕೋಟಿ ರೂಪಾಯಿ ವಂಚಿಸಿದ್ದ ವಂಚಕನ ಬಂಧನವಾಗಿದೆ. ಸೈಬರ್ ಕ್ರೈಂ ಮೂಲಕ, ಪರವಾನಗಿ ಪತ್ರವನ್ನ ದುರುಪಯೋಗ ಪಡಿಸಿಕೊಂಡು ಹರೀಶ್ ಅಹೂಜಾಗೆ ಈ ರೀತಿ ವಂಚಿಸಲಾಗಿತ್ತು. ಹರೀಶ್ ಅಹೂಜಾ ಫರೀದಾಬಾದ್ ಮೂಲದ ಶಾಹಿ ಎಕ್ಸ್‌ಫೋರ್ಟ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಈ ಕಂಪೆನಿಯ ಲೈಸೆನ್ಸ್‌ನ ಹಣವನ್ನ ಡಿಜಿಟಲ್ ಕೂಪನ್ ಮೂಲಕ ವಂಚಕರು ಲಪಟಾಯಿಸಿದ್ದಾರೆ. ಈ ಘಟನೆ ಜುಲೈ 2021ರಲ್ಲೇ ನಡೆದಿತ್ತು.

ಆಗಲೇ ಅಹೂಜಾ ದೂರು ದಾಖಲಿಸಿದ್ದರು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರು, ಡಿಸೆಂಬರ್‌ನಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇಂದು ಆರೋಪ ಸಾಬೀತಾಗಿದೆ. ಇನ್ನು ಈ ಕೆಲಸದಲ್ಲಿ 9ಜನ ಶಾಮೀಲಾಗಿದ್ದಾರೆ. ಶಾಮೀಲಾದವರೆಲ್ಲ ವಿದ್ಯಾವಂತರು. ಉತ್ತಮ ಹುದ್ದೆಯಲ್ಲಿದ್ದವರು. ಮತ್ತು ವಯಸ್ಸಾದವರೂ ಈ ಟೀಮ್‌ನಲ್ಲಿ ಇದ್ದಾರೆ. ಕರ್ನಾಟಕ, ಮುಂಬೈ, ಚೆನ್ನೈ, ದೆಹಲಿ ಸೇರಿ ಹಲವು ರಾಜ್ಯದ ಜನ ಇದರಲ್ಲಿ ಶಾಮೀಲಾಗಿ, ಹರೀಶ್ ಅಹೂಜಾರ 27 ಕೋಟಿ ರೂಪಾಯಿ ಲಪಟಾಯಿಸಿದ್ದಾರೆ.

ಈ ಕೆಲಸದಲ್ಲಿ ಕರ್ನಾಟಕದ ಓರ್ವ ವ್ಯಕ್ತಿ ಶಾಮೀಲಾಗಿದ್ದು, ಆತನನ್ನು ರಾಯಚೂರಿನ ಗಣೇಶ್ ಪರಶುರಾಮ್ ಎಂದು ಗುರುತಿಸಲಾಗಿದೆ. ಇವರೆಲ್ಲ ಇಂಥ ಕೆಲಸದಲ್ಲಿ ಪರಿಣಿತಿ ಹೊಂದಿದ್ದು, ಈ ಬಗ್ಗೆ ಬೇರೆ ಬೇರೆ ಕೆಲಸಗಳನ್ನು ಬಲ್ಲವರು, ಉಳಿದ ಕೆಲಸಗಳಿಗಾಗಿ ಕೈ ಜೋಡಿಸಿದ್ದರು.

- Advertisement -

Latest Posts

Don't Miss