ಇತ್ತೀಚೆಗೆ ಯ್ಯೂಟ್ಯೂಬರ್‌ಗಳ ಸಂಖ್ಯೆ ಹೆಚ್ಚಾಗಿದೆ. ಮೂರು ನಾಲ್ಕು ವರ್ಷದಲ್ಲಿ ಯೂಟ್ಯೂಬರ್‌ಗಳ ಸಂಖ್ಯೆ ಸಡನ್ ಆಗಿ ಏರಿಕೆಯಾಗಿದೆ. ತಮ್ಮ ಸಬ್‌ಸ್ಕ್ರೈಬರ್‌ಗಳ ಏರಿಕೆಯಾಗಲೆಂದು ವಿವಿಧ ರೀತಿಯ ಆಟವಾಡಿಸುವುದು, ಪ್ರಶ್ನೆ ಕೇಳುವುದು. ಆ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಗಿಫ್ಟ್ ಗಳನ್ನು ನೀಡುವುದೆಲ್ಲ ಈಗ ಕಾಮನ್ ಆಗಿದೆ. ಯಾಕಂದ್ರೆ ಅದರಿಂದಲೇ ಹೆಚ್ಚು ಆದಾಯ ಬರೋದು. ಆದ್ರೆ ಇಲ್ಲೋರ್ವ ಯೂಟ್ಯಬರ್ ತನ್ನ ಸಬ್‌ಸ್ಕ್ರೈಬರ್ಸ್‌ಗಳಿಗಾಗಿ ಫ್ರೀ ಪೆಟ್ರೋಲ್ ಬಂಕ್ ಓಪೆನ್ ಮಾಡಿದ್ದಾನೆ.
ಇವನು ತೆಲುಗು ಭಾಷೆಯ ಯ್ಯೂಟ್ಯೂಬರ್ ಆಗಿದ್ದು, 20 ಲಕ್ಷಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಗಳನ್ನ ಹೊಂದಿದ್ದಾನೆ. ಈ ಮೊದಲು ಕೂಡ ಹರ್ಷ ಇದೇ ರೀತಿ, ಲಕ್ಷ ರೂಪಾಯಿ ಗಿಫ್ಟನ್ನ ಸಬ್‌ಸ್ಕ್ರೈಬರ್ಸ್‌ಗೆ ಕೊಟ್ಟಿದ್ದಾನೆ. ಬಡವರಿಗೆ ದುಡ್ಡು ಹಂಚಿದ್ದಾನೆ. ಇನ್ನೂ ಹಲವು ಉತ್ತಮ ಕೆಲಸಗಳನ್ನ ಮಾಡಿದ್ದಾನೆ. ಆದ್ರೆ ಫ್ರೀ ಪೆಟ್ರೋಲ್ ಬಂಕ್ ವಿಷಯ ಮಾತ್ರ ಸಖತ್ ವೈರಲ್ ಆಗಿದೆ.
ಹರ್ಷ ತಿರುಗಾಡಲು ಹೋದಾಗ ಅಲ್ಲಿ ಇಬ್ಬರು ಪೆಟ್ರೋಲ್ ತುಂಬಿಸುವ ವಿಚಾರವಾಗಿ ಜಗಳವಾಡುತ್ತಿದ್ದರಂತೆ. ಅವರು ಹರ್ಷನ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬರ್ಸ್ ಆಗಿದ್ದರು. ನನ್ನ ಚಾನೆಲ್ ಚಂದಾದಾರರು ಪೆಟ್ರೋಲ್‌ಗಾಗಿ ಹೀಗೆ ಜಗಳವಾಡಬಾರದು ಎಂದು, ಹರ್ಷ ಪೆಟ್ರೋಲ್ ರೇಟ್ ಬಗ್ಗೆ ವಿಚಾರಿಸಿದ್ದಾನೆ. ನಂತರ ಆ ಯುವಕರು ಜಗಳವಾಡುತ್ತಿದ್ದ ಸ್ಥಳದಲ್ಲೇ ಪೆಟ್ರೋಲ್ ಬಂಕ್ ಓಪೆನ್ ಮಾಡಲು ನಿರ್ಧರಿಸಿದ್ದಾನೆ.
ಅಲ್ಲೇ ಹತ್ತಿರದಲ್ಲಿದ್ದ ಪೆಟ್ರೋಲ್ ಬಂಕ್ ಮಾಲೀಕನ ಬಳಿ ಮಾತನಾಡಿ 13 ಗಂಟೆ ಸಲುವಾಗಿ ಬಂಕ್ ತನಗೆ ಬಿಟ್ಟು ಕೊಡಬೇಕೆಂದು ಕೇಳಿದ್ದಾನೆ. ಅದಕ್ಕೆ ಬೇಕಾದಷ್ಟು ದುಡ್ಡನ್ನೂ ಕೊಟ್ಟಿದ್ದಾನೆ. ನಂತರ ತನ್ನ ಕಟೌಟ್ ನಿಲ್ಲಿಸಿ, ಪಾಂಪ್ಲೇಟ್ ಹಂಚಿದ್ದು, ಫ್ರೀ ಪೆಟ್ರೋಲ್ ಸಿಗತ್ತೆ ಅಂತಾ ಸುಮಾರು ಜನ ಬಂದಿದ್ದಾರೆ. ಅವರಿಗೆಲ್ಲ ಹರ್ಷ ಫ್ರೀ ಪೆಟ್ರೋಲ್ ಹಂಚಿದ್ದಲ್ಲದೇ, ಗೇಮ್ ಆಡಿಸಿ, ಗಿಫ್ಟ್‌ಗಳನ್ನ ನೀಡಿದ್ದಾನೆ.