Bollywood News: ನಟಿ ಪ್ರಿಯಾಂಕಾ ಛೋಪ್ರಾ ಕೆಲ ದಿನಗಳ ಹಿಂದಷ್ಟೇ ಕುಟುಂಬ ಸಮೇತರಾಗಿ ಭಾರತಕ್ಕೆ ಬಂದಿದ್ದರು. ಇದೀಗ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ. ಪ್ರಿಯಾಂಕಾಳೊಂದಿಗೆ, ಈಕೆಯ ಗಂಡ ನಿಕ್ ಜೋನಸ್ ಮತ್ತು ಮಗಳು ಮಾಲತಿ ಕೂಡ, ಬಾಲಕರಾಮನ ದರ್ಶನ ಮಾಡಿದ್ದಾರೆ.
ವಿದೇಶದಲ್ಲಿ ಪತಿಯ ಮನೆಯಲ್ಲಿರುವ ಪ್ರಿಯಾಂಕಾ ಛೋಪ್ರಾ, ಕಳೆದ ವರ್ಷ ಪರಿಣಿತಿ ಛೋಪ್ರಾ ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದಾದ ಬಳಿಕ ಈ ವರ್ಷ, ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿರುವ ಪ್ರಿಯಾಂಕಾ, ಸೆಲೆಬ್ರಿಟಿಗಳ ಮನೆಗೆ, ಕಾರ್ಯಕ್ರಮಕ್ಕೆ, ಪಾರ್ಟಿಗಳಿಗೆ ಹಾಜರಾಗಿದ್ದಾರೆ. ಇದೀಗ ರಾಮಲಲ್ಲಾನ ದರ್ಶನ ಮಾಡಿದ್ದು, ಪ್ರಿಯಾಂಕಾ ಫ್ಯಾನ್ಸ್ ಈಕೆಯ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಹಿಂದೂ ಧಾರ್ಮಿಕ ಉಡುಗೆಯಲ್ಲಿ ಬಂದ ಪ್ರಿಯಾಂಕಾ, ಜೋನಸ್, ಮತ್ತು ಮಾಲತಿಗೆ ಇಲ್ಲಿನ ಪುರೋಹಿತರು ಪ್ರಸಾದ ನೀಡಿ, ಆಶೀರ್ವಾದ ಮಾಡಿದರು. ಇನ್ನು ಹಲವು ಭಕ್ತರು ರಾಮಲಲ್ಲಾನ ದರ್ಶನ ಮಾಡಿ, ಜೊತೆ ತಾರಾ ದಂಪತಿಯ ಜೊತೆ ನಿಂತು ಫೋಟೋ ತೆಗೆಸಿಕೊಂಡರು.
ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..
ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..

