ಮದ್ಯಪ್ರಿಯರಿಗೆ ಬಿಗ್ ಶಾಕ್: ಅವಳಿ ನಗರದಲ್ಲಿ 5 ದಿನ ಮದ್ಯ ಮಾರಾಟ ಬಂದ್

Hubli News: ಹುಬ್ಬಳ್ಳಿ: ಮದ್ಯಪ್ರಿಯರೇ ನೀವು ನೋಡಲೇ ಬೇಕಾದ ಸುದ್ದಿ ಇದು. ಅವಳಿ ನಗರದಲ್ಲಿ ಐದು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ಹೋಳಿ ಹುಣ್ಣಿಮೆ ಅಂಗವಾಗಿ, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಾರ್ಚ್ 25 ರಿಂದ 29 ರವರೆಗೆ ಬಣ್ಣದ ಓಕುಳಿ (ರಂಗಪಂಚಮಿ) ಆಚರಿಸುವುದರಿಂದ, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ, ಮುಂಜಾಗ್ರತಾ ಕ್ರಮವಾಗಿ ಧಾರವಾಡ ನಗರದಲ್ಲಿ ಮಾರ್ಚ್ 25 ರಂದು ಸಂಜೆ 6 ಗಂಟೆಯಿಂದ ಮಾರ್ಚ್ 26 ರಂದು ಮಧ್ಯರಾತ್ರಿ 11.59 ಗಂಟೆಯವರೆಗೆ ಮದ್ಯ ಮಾರಾಟ ಬಂದ್‌ ಮಾಡಿದ್ದು, ಇನ್ನು ಹುಬ್ಬಳ್ಳಿ ನಗರದಲ್ಲಿ ಮಾರ್ಚ್ 27 ರಂದು ಸಂಜೆ 6 ಗಂಟೆಯಿಂದ ಮಾರ್ಚ್ 30 ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನ ನಿಷೇಧಾಜ್ಞೆ ಹೊರಡಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾ‌ರ್ ಅವರು ಆದೇಶಿಸಿದ್ದಾರೆ.

ಯಾರಾದರೂ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಿದ್ರೆ, ಕಠಿಣ ಶಿಕ್ಷೆ ನೀಡಲಾಗುತ್ತದೆಂದು ಎಚ್ಚರಿಕೆ ಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೂ ಈ ಅಂಗಡಿಯಲ್ಲಿ ಸಾಲ ನೀಡಲಾಗುವುದಿಲ್ಲವಂತೆ..

ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವದಂತಿ

ನೀವು ಯಾವ ಸೀಮೆ ‘ಸ್ಟ್ರಾಂಗ್’ ಸಿಎಂ ಬಿಡ್ರೀ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೀತಂಗೌಡ ಕಿಡಿ..

About The Author