Monday, July 22, 2024

Latest Posts

ನಮಗೆ ಮೋಸವಾಗಿದೆ..ನಾವು ಯಾರಿಗೆ ಮೋಸ ಮಾಡಲಿ-ರಾಧಿಕಾ ಕುಮಾರಸ್ವಾಮಿ

- Advertisement -

ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಡಿ ಅರೆಸ್ಟ್ ಆಗಿರುವ ಯುವರಾಜ್  ಅಲಿಯಾಸ್ ಸ್ವಾಮಿ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಡಿ ಕನ್ನಡ ಚಿತ್ರರಂಗದ ಸ್ವೀಟಿ ಖ್ಯಾತಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿತೇಜ್ ಹೆಸರು ಕೇಳಿ ಬಂದಿದೆ.  ಈ ಹಿಂದೆ ರಾಧಿಕಾ ಮತ್ತು ಅವರ ಸಹೋದರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ರಾಧಿಕಾ, ಸಹೋದರ ರವಿತೇಜ್ ಗೂ ಯುವರಾಜನಿಗೂ ಇವರು ಲಿಂಕ್ ಏನು..? ಆರೋಪಿ ಯುವರಾಜನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ 1.28 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸುದ್ದಿಗೋಷ್ಠಿ ಕರೆದ ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ.

ಯುವರಾಜ್ ಪರಿಚಯವಿದ್ದಿದ್ದು ನಿಜ

ಯುವರಾಜ್ಅವರು ಜ್ಯೋತಿಷಿಗಳು. 18 ವರ್ಷಗಳಿಂದ ಅವರ ಪರಿಚಯ ನಮ್ಮ ಕುಟುಂಬಕ್ಕಿದೆ. ಅವರು ಹೇಳುತ್ತಿದ್ದ ಭವಿಷ್ಯದ ಬಗ್ಗೆ ನಮ್ಮ ಪೋಷಕರಿಗೆ ನಂಬಿಕೆ ಇತ್ತು. . ನನ್ನ ತಂದೆ ಬದುಕಿದ್ದಾಗ ಅವರು ಮನೆಗೆ ಬರುತ್ತಿದ್ದರು. ಅದನ್ನು ಹೊರತು ಪಡಿಸಿ ಅವರೊಂದಿಗೆ ಯಾವುದೇ ರೀತಿಯ ವ್ಯಾವಹಾರಿಕ ಸಂಬಂಧ ಮಾಡಿಲ್ಲ. ಅವರ ಬಂಧನವಾದಾಗಲೇ ತನಗೆ ತಿಳಿದಿದ್ದು ಅವರು ವಂಚನೆಯ ಆರೋಪ ಎಂದಿದ್ದಾರೆ ರಾಧಿಕಾ.

ನನ್ನ ಖಾತೆಗೆ 15 ಲಕ್ಷ ಹಣ ಜಮೆ ಮಾಡಿದ್ದರು

ಆರೋಪಿ ಯುವರಾಜ್ ಜೊತೆಗಿನ ವ್ಯವಹಾರಗಳ ಬಗ್ಗೆ ಮಾತನಾಡಿದ ರಾಧಿಕಾ, ಯುವರಾಜ್ ಪತ್ನಿ ಹೆಸರನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಈ ವಿಚಾರವಾಗಿ ನಾವು ಚರ್ಚೆ ಮಾಡಿದ್ದೇವು. ಅದಕ್ಕಾಗಿ ಮುಂಗಡ ಹಣ ರೂಪದಲ್ಲಿ ನನ್ನ ಖಾತೆಗೆ 15 ರೂಪಾಯಿ ಜಮೆ ಮಾಡಿದ್ದರು. ಅದನ್ನು ಹೊರತುಪಡಿಸಿ ಯುವರಾಜ್ ಅವರಿಂದ ಬೇರೆ ಯಾವುದೇ ಹಣ ಪಡೆದಿಲ್ಲ ಎಂದಿದ್ದಾರೆ.

ಸಿನಿಮಾ ಮಾಡಬೇಕೆಂದು ಚರ್ಚೆ ನಡೆಸಿದ್ದರು. ಸಿನಿಮಾ ಮಾಡುವುದು ಸುಲಭವಲ್ಲ. ಒಂದು ಟೀಮ್ ಮಾಡಿಕೊಳ್ಳಿ ಎಂದು ಹೇಳಿದ್ದೆ. ಆದ್ರೆ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿಲ್ಲ. ನನವು ಹಲವು ರಾಜಕಾರಣಿಗಳನ್ನು ಭೇಟಿಯಾಗಿದ್ದೇನೆ. ಆದರೆ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇರಲಿಲ್ಲ. ನನಗೆ ಸಿನಿಮಾ ಮೇಲೆ ಮಾತ್ರ ಹೆಚ್ಚು ಆಸಕ್ತಿ ಎಂದು ರಾಧಿಕಾ ತಿಳಿಸಿದ್ದಾರೆ.

- Advertisement -

Latest Posts

Don't Miss