Tuesday, October 15, 2024

Latest Posts

ದೀಪಿಕಾ ಪಡುಕೋಣೆ ಮಗು ಹುಟ್ಟಿದ್ದಕ್ಕೆ ‘ನಾನು ಆಂಟಿ ಆದೆ’ ಎಂದು ಶಾಪಿಂಗ್ ಮಾಡಿದ ನಟಿ ರಾಖಿ

- Advertisement -

Bollywood News: ಮೊದ ಮೊದಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿ ಎಂದು ಅನೌನ್ಸ್ ಮಾಡಿದಾಗ, ಆಕೆಯ ಬೇಬಿ ಬಂಪ್ ನೋಡಿ, ಇದು ಫೆಕ್ ಪ್ರೆಗ್ನೆನ್ಸಿ ನ್ಯೂಸ್. ಅವರು ಬಟ್ಟೆ ಇಟ್ಟುಕೊಂಡಿದ್ದಾರೆ. ಅವರು ಬೇರೆ ರೀತಿಯಲ್ಲಿ ಮಗು ಪಡೆಯುತ್ತಿದ್ದಾರೆ. ಅದಕ್ಕೆ ನಾಟಕ ಮಾಡುತ್ತಿದ್ದಾರೆಂದು ನೆಟ್ಟಿಗರು ಆರೋಪಿಸಿದ್ದರು.

ಆದರೆ ದೀಪಿಕಾ ಹೊಟ್ಟೆ ತೋರಿಸಿ, ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಫೋಟೋಶೂಟ್ ಮಾಡಿಸಿ, ಈ ರೀತಿ ಮಾತನಾಡುವವರ ಬಾಯಿ ಮುಚ್ಚಿಸಿದರು. ಬಳಿಕ ಗಣೇಶ ಚತುರ್ಥಿ ಮರುದಿನ ಆಸ್ಪತ್ರೆಗೆ ದಾಖಲಾಗಿದ್ದು, ದೀಪಿಕಾ ಮತ್ತು ರಣ್ವೀರ್‌ಗೆ ಹೆಣ್ಣು ಮಗು ಹುಟ್ಟಿದೆ ಎಂಬ ಸುದ್ದಿ ಬಂತು.

ಈ ಸುದ್ದಿ ಬಂದ ಬಳಿಕ, ನಟಿ ರಾಖಿ ಸಾವಂತ್ ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಕಾರಣಕ್ಕಾಗಿ ಟ್ರೋಲ್ ಆಗಿದ್ದಾರೆ. ಡಿಪ್ಪಿ ಮತ್ತು ಗಣ್ವೀರ್‌ಗೆ ಮಗುವಾಗಿದ್ದು, ನಾನು ಆಂಟಿ ಆದೆ ಎಂದು ರಾಖಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿವಿಧ ರೀತಿಯ ಗೊಂಬೆಗಳನ್ನು ಶಾಪಿಂಗ್ ಮಾಡಿದ್ದಾರೆ.

ಈ ವೇಳೆ ವೀಡಿಯೋದಲ್ಲಿ ಮಾತನಾಡಿದ ರಾಖಿ, ದೀಪಿಕಾ ನಿಮಗೆ ನೆನಪಿದೆಯೇ, ನಾವಿಬ್ಬರೂ ಸೇರಿ ನೃತ್ಯ ಮಾಡಿದ್ದೆವು. ನಮ್ಮ ನಟನಾ ವೃತ್ತಿಯನ್ನು ಶುರು ಮಾಡಿದ್ದೆವು. ನೀವು ಈಗ ದೊಡ್ಡ ನಟಿಯಾದ್ರಿ, ಪತ್ನಿಯಾದ್ರಿ, ಇದೀಗಿ ತಾಯಿಯೂ ಆಗಿದ್ದೀರಿ ಎಂದು ಹೇಳಿದ್ದಾರೆ.

ರಾಖಿ ದುಬೈನಲ್ಲಿ ಶಾಪಿಂಗ್ ಮಾಡಿದ್ದು, ಮಗುವಿಗಾಗಿ ತಾನು ಗೊಂಬೆಗಳನ್ನು, ಗಿಫ್ಟ್‌ಗಳನ್ನು ತೆಗೆದುಕೊಂಡಿದ್ದೇನೆ ಎಂದು ರಾಖಿ ಹೇಳಿದ್ದಾರೆ. ಇವರು ಪ್ರೀತಿಯಿಂದಲೇ ಮಗುವಿಗೆ ಗೊಂಬೆಗಳನ್ನು ತೆಗೆದುಕೊಂಡಿದ್ದರೂ, ರಾಖಿ ಟ್ರೋಲ್ ಆಗಿದ್ದಾರೆ. ಪ್ರಚಾರ ಪಡೆಯಲು ರಾಖಿ ಈ ಗಿಮಿಕ್‌ ಮಾಡಿದ್ದಾರೆಂದು ಟ್ರೋಲರ್ಸ್ ಟ್ರೋಲ್ ಮಾಡಿದ್ದಾರೆ.

ಈ ಟ್ರೋಲ್‌ಗಳಿಗೆ ವಿವಿಧ ರೀತಿಯ ಕಾಮೆಂಟ್ಸ್ ಬಂದಿದ್ದು, ದಯವಿಟ್ಟು ನೀನು ದೂರದಿಂದಲೇ ವಿಶ್ ಮಾಡು, ಮಗುವಿನ ಹತ್ತಿರ ಬರಬೇಡ ಎಂದು ದೀಪಿಕಾ ಮನಸ್ಸಿನಲ್ಲೇ ಹೇಳಿಕೊಂಡಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ದೀಪಿಕಾಗೆ ಮಗುವಾಗಿದ್ದಕ್ಕೆ, ರಾಖಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಂದಿರುವ ಕಾಮೆಂಟ್ಗಳಲ್ಲಿ ಹೆಚ್ಚಿನ ಕಾಮೆಂಟ್ಸ್ ರಾಖಿ ವಿರುದ್ಧವೇ ಇದೆ.

- Advertisement -

Latest Posts

Don't Miss