- Advertisement -
ರಾಜ್ಯದಲ್ಲಿ ಹಿಜಾಬ್ ವಿವಾದ (Hijab Controversy) ಕುರಿತಂತೆ ಭಾರಿ ಚರ್ಚೆಗಳಾಗುತ್ತಿದ್ದು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕಾಗಿ ಯುವತಿಯೊಬ್ಬರು ಕೋರ್ಟ್ (court) ಮೆಟ್ಟಿಲೇರಿದ್ದರು. ಈಗ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಹಿಜಾಬ್ ವಿವಾದ ಕುರಿತಂತೆ ನಟಿ ರಮ್ಯಾ (Actress Ramya) ಸಹ ಟ್ವೀಟ್ ಮಾಡಿದ್ದು, ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ನೋಡಿ ನನಗೆ ಬೇಸರವಾಗಿದೆ. ಯುವಕರು (Young people) ಇಬ್ಬಾಗ ಆಗುತ್ತಿರುವುದು ಬೇಸರದ ವಿಚಾರ, ಕಾಲೇಜು ಆವರಣದಲ್ಲಿ ಸಮವಸ್ತ್ರ ಸಂಘರ್ಷ (Uniform conflict) ಬೇಸರವನ್ನು ತಂದಿದೆ ಎಂದು ನಟಿ ರಮ್ಯಾ ತಮ್ಮ Divya Spandana ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
- Advertisement -