Tuesday, July 1, 2025

Latest Posts

ನಟ ವಿಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ನಟಿ ರಶ್ಮಿಕಾ ಮಂದಣ್ಣ

- Advertisement -

Bollywood News: ಪುಷ್ಪ 2 ಸಿನಿಮಾ ಸಕ್ಸಸ್ ನಂತರ, ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದಲೂ ಭರ್ಜರಿ ಆಫರ್ ಬರುತ್ತಲಿದೆ. ಸಲ್ಮಾನ್ ಖಾನ್ ಜೊತೆಯೂ ರಶ್ಮಿಕಾ ಕೆಲಸ ಮಾಡುತ್ತಿದ್ದು, ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗೆ ಸದ್ಯ ರಶ್ಮಿಕಾ ಯಾವ ಮೂವಿ ಶೂಟಿಂಗ್‌ಗೂ ಹೋಗುತ್ತಿಲ್ಲ. ಆದರೆ ಛಾವಾ ಸಿನಿಮಾ ಪ್ರಮೋಷನ್‌ಗೆ ಮಾತ್ರ ರಶ್ಮಿಕಾ ಕುಂಟುತ್ತ, ವ್ಹೀಲ್‌ಚೇರ್ ಮೇಲೆ ಬಂದು ತಮ್ಮ ಇರುವಿಕೆ ತೋರಿಸುತ್ತಿದ್ದಾರೆ.

ರಶ್ಮಿಕಾ ಛಾವಾ ಸಿನಿಮಾ ತಂಡದ ಜೊತೆ ಅಮೃತ್‌ಸರನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ನಟ ವಿಕ್ಕಿ ಕೌಶಲ್, ರಶ್ಮಿಕಾ ಮತ್ತು ಛಾವಾ ಚಿತ್ರದ ಕೆಲವರು ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿ, ಗುರುಗಳ ಆಶೀರ್ವಾದ ಪಡೆದಿದ್ದಾರೆ. ಸದ್ಯ ರಶ್ಮಿಕಾ ಕಾಲು ನೋವಿನಿಂದ ಕೊಂಚ ಚೇತರಿಸಿಕೊಂಡಿದ್ದು, ಹಲವು ಕಡೆ ಛಾವಾ ಚಿತ್ರದ ಪ್ರಮೋಷನ್‌ಗೆ ಹೋಗುತ್ತಿದ್ದಾರೆ.

ಛಾವಾ ಸಿನಿಮಾದಲ್ಲಿ ಛತ್ರಪತಿ ಮಹಾರಾಜರ ಮಗನಾದ ಛತ್ರಪತಿ ಸಾಂಭಾಜಿ ಜೀವನದ ಕಥೆ ತೋರಿಸಲಾಗಿದೆ. ಸಾಂಭಾಜಿ ಮಹಾರಾಜರ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದು, ಅವರ ಪತ್ನಿ ಏಸುಬಾಯಿ ಪಾತ್ರವನ್ನು ರಶ್ಮಿಕಾ ನಿರ್ವಹಿಸಿದ್ದಾರೆ. ಮೊಘಲ್ ದೊರೆಗಳಿಂದ ಹಿಂದೂಸ್ತಾನವನ್ನು ರಕ್ಷಿಸಲು ಸಂಭಾಜಿ ಮಹಾರಾಜರು ಏನೇನು ಮಾಡಿದ್ದರು. ಅವರ ಶೌರ್ಯ ಪರಾಕ್ರಮ ಎಂಥದ್ದು ಅನ್ನೋದನ್ನು ಛಾವಾ ಸಿನಿಮಾದಲ್ಲಿ ತೋರಿಲಾಗಿದೆ.

ರಶ್ಮಿಕಾ ಮಂದಣ್ಣ ಫ್ಯಾನ್ಸ್ ಈ ಸಿನಿಮಾಗಾಗಿ ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಕಾರಣವೇನೆಂದರೆ, ರಶ್ಮಿಕಾ ಮೊದಲ ಬಾರಿ ಬಿಗ್‌ಬಜೆಟ್‌ನ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಎ್ಲ ನಟರ ಲಕ್ಕಿ ನಟಿ ಎನ್ನಿಸಿಕೊಂಡಿದ್ದಾರೆ. ಅದೇ ರೀತಿ ವಿಕ್ಕಿ ಲಕ್ ಖುಲಾಯಿಸುತ್ತಾ ಇಲ್ಲವಾ ಅಂತಾ ಕಾದು ನೋಡಬೇಕಿದೆ.

- Advertisement -

Latest Posts

Don't Miss