- Advertisement -
ಬೆಂಗಳೂರು: ಬಹುಭಾಷಾ ನಟಿ, ಸ್ಯಾಂಡಲ್ವುಡ್ನ ಗ್ಲಾಮರ್ ಗೊಂಬೆ ಸುಮನ್ ರಂಗನಾಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಸಜನ್ ಎಂಬುವರ ಜೊತೆ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆರು ತಿಂಗಳ ಹಿಂದೆ ಪರಿಚಯವಾಗಿದ್ದ ಸಜನ್ ಹಾಗೂ ಸುಮನ್ ಬೆಸ್ಟ್ ಫ್ರೆಂಡ್ಸ್ ಆಗಿದ್ರು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸ್ತಿದ್ರು. ಇದೀಗ ಸುಮನ್ ಮತ್ತು ಸಜನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂದಹಾಗೆ 45 ವರ್ಷದ ನಟಿ ಸುಮನ್ ರಂಗನಾಥ್ ಕನ್ನಡ, ತಮಿಳು, ತೆಲುಗು, ಬೆಂಗಾಲಿ,ಬೋಜ್ಪುರಿ ಚಿತ್ರಗಳೂ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿದೆ ಟಫ್ ಫೈಟ್- ಬಾಕ್ಸ್ ಆಫೀಸ್ ಧೂಳೆಬ್ಬಿಸೋದು ಯಾರು..? ಮಿಸ್ ಮಾಡ್ದೇ ಈ ವಿಡಿಯೋ ನೋಡಿ
- Advertisement -