ನವದೆಹಲಿ: ಬ್ಯಾಂಕ್ ಖಾತೆಯಿಂದ 50ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡೋದಕ್ಕೆ ಖಡ್ಡಾಯವಾಗಿ ಬೇಕಾಗಿದ್ದ ಪಾನ್ ಕಾರ್ಡ ಇನ್ನು ಮುಂದೆ ಅಗತ್ಯವಿರೋದಿಲ್ಲ ಅಂತ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ಪಾವತಿಸಲು ಇನ್ನುಮುಂದೆ ಪಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಉಪಯೋಗಿಸಬಹುದೆಂದು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿರೋ ಬೆನ್ನಲ್ಲೇ ಇದೀಗ ಪಾನ್ ಕಾರ್ಡ್ ಮತ್ತೊಂದು ವಿಚಾರಕ್ಕೆ ಮೂಲೆಗುಂಪಾಗಲಿದೆ. ಹೌದು, ಕಪ್ಪು ಹಣದ ಮೇಲೆ ನಿಗಾ ಇಡೋ ಹಿನ್ನೆಲೆಯಲ್ಲಿ 50 ಸಾವಿರಕ್ಕೂ ಅಧಿಕ ವಹಿವಾಟಿಗೆ ಪಾನ್ ಕಾರ್ಡ್ ಖಡ್ಡಾಯಗೊಳಿಸಲಾಗಿತ್ತು. ಆದ್ರೆ ಇನ್ನುಮುಂದೆ ಬ್ಯಾಂಕ್ ಖಾತೆಯಿಂದ 50 ಸಾವಿರಕ್ಕೂ ಅಧಿಕ ಹಣ ಡ್ರಾ ಮಾಡೋದಕ್ಕೆ ಪಾನ್ ಕಾರ್ಡ್ ಅಗತ್ಯವಿರೋದಿಲ್ಲ. ಬದಲಾಗಿ ಆಧಾರ್ ಕಾರ್ಡ್ ಬಳಕೆ ಮಾಡಬಹುದು ಅಂತ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಬಜೆಟ್ ನಲ್ಲಿ ಟ್ಯಾಕ್ಸ್ ಕಟ್ಟೋರಿಗೆ ಲಾಭವೇನು ನಷ್ಟವೇನು..?ಮಿಸ್ ಮಾಡದೇ ಈ ವಿಡಿಯೋ ನೋಡಿ