Sunday, September 8, 2024

Latest Posts

ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್

- Advertisement -

National News: ಇನ್ನು ಮುಂದೆ ಕೇಂದ್ರ ಆಸ್ಪತ್ರೆಯ ವೈದ್ಯರು ತಾವಾಗಿಯೇ ರೋಗಿಯನ್ನು ಐಸಿಯುಗೆ ಸೇರಿಸಿ, ಚಿಕಿತ್ಸೆ ಕೊಡಿಸುವಂತಿಲ್ಲ. ಬದಲಾಗಿ, ಆ ರೋಗಿಯ ಕುಟುಂಬಸ್ಥರ ಒಪ್ಪಿಗೆ ಪಡೆದ ಬಳಿಕವೇ, ರೋಗಿಯನ್ನು ಐಸಿಯುಗೆ ಸೇರಿಸಬೇಕು ಎಂಬ ಹೊಸ ರೂಲ್ಸ್ ಜಾರಿಯಾಗಿದೆ.

ಕೇಂದ್ರದ ಆರೋಗ್ಯ ಸಚಿವಾಲಯ ಈ ಹೊಸ ಮಾರ್ಗಸೂಚಿ ಹೊರಡಿಸಿದ್ದು, 24 ತಜ್ಞರು ಈ ಬಗ್ಗೆ ಚರ್ಚಿಸಿ, ಈ ರೂಲ್ಸ್ ಜಾರಿ ಮಾಡಿದ್ದಾರೆ. ಕೆಲವು ಕಡೆ ರೋಗಿ ಆರೋಗ್ಯವಾಗಲು ಸಾಧ್ಯವೇ ಇಲ್ಲ. ಅವನ ಸಾವು ಖಚಿತ ಎಂಬ ಸಂದರ್ಭದಲ್ಲಿಯೂ ರೋಗಿಯನ್ನು ಒತ್ತಾಯಪೂರ್ವಕವಾಗಿ ಐಸಿಯುಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಎಷ್ಟೋ ಕೇಸ್‌ಗಳಲ್ಲಿ ನಮ್ಮ ಮನೆಯವರನ್ನು ಮನೆಗೆ ಕಳಿಸಿಬಿಡಿ, ನಾವು ಅವರೊಂದಿಗೆ ಕೊನೆಯ ಸಮಯವನ್ನು ಕಳೆಯುತ್ತೇವೆ ಎಂದು ಹೇಳಿದರೂ, ಕೆಲವು ಆಸ್ಪತ್ರೆಗಳ ವೈದ್ಯರು ಒಪ್ಪುವುದಿಲ್ಲ.

ಹಾಗಾಗಿ ಇನ್ನು ಮುಂದೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಆಸ್ಪತ್ರೆಯಲ್ಲಿ, ರೋಗಿಯನ್ನು ಐಸಿಯುಗೆ ಸೇರಿಸಿ, ಚಿಕಿತ್ಸೆ ಕೊಡಿಸಬೇಕು ಎಂದಲ್ಲಿ, ಕುಟುಂಬಸ್ಥರ ಒಪ್ಪಿಗೆ ಪಡೆಯಲೇಬೇಕು. ಇಷ್ಟೇ ಅಲ್ಲದೇ, ರೋಗಿಯ ಹಲವು ಅಂಗಾಂಗಗಳನ್ನು ಪರೀಶಿಲಿಸಿ, ಬಳಿಕ ರೋಗಿಯನ್ನು ಐಸಿಯುಗೆ ದಾಖಲಿಸಬೇಕು ಎಂಬ ರೂಲ್ಸ್ ಕೂಡ ಇದೆ.

ಬಾಬ್ರಿ ಮಸೀದಿ ಕಳೆದುಕೊಂಡ ಬಗ್ಗೆ ನಿಮಗೆ ದುಃಖವಿಲ್ಲವೇ..?: ಮುಸ್ಲಿಮರಿಗೆ ಓವೈಸಿ ಪ್ರಶ್ನೆ..

ರಾಮ ಮಂದಿರ ಮುಂದಿಟ್ಟು ಬಿಜೆಪಿ ರಾಜಕಾರಣ ಮಾಡ್ತಿದೆ: ಶಾಸಕ ಅಬ್ಬಯ್ಯ ಕಿಡಿ

ರಾಮ ಭಕ್ತನ ಬಂಧನ ಸರ್ಕಾರದ ಕುಹಕ, ನೀಚತನ: ಕೇಂದ್ರ ಸಚಿವ ಜೋಶಿ ವಾಗ್ದಾಳಿ

- Advertisement -

Latest Posts

Don't Miss