ಕಾಬೂಲ್: ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಗೆ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ (ಎಸಿಬಿ) 17 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಆ.27ರಿಂದ ಆರಂಭವಾಗಲಿರುವ ಯುಎಇಯಲ್ಲಿ ಟಿ20 ಟೂರ್ನಿ ಮಂಗಳವಾರ 17 ಆಟಗಾರರನ್ನೊಳಗೊಂಡ ಪ್ರಕಟಿಸಲಾಯಿತು. ಅಫ್ಘಾನಿಸ್ಥಾನ ತಂಡವನ್ನು ಮೊಹ್ಮದ್ ನಬಿ ತಂಡವನ್ನು ಮುನ್ನಡೆಸಲಿದ್ದಾರೆ.
ಸಮಿಹುಲ್ಲಾ ಶಿನವಾರಿ ತಂಡಕ್ಕೆ ಮರಳಿದ್ದಾರೆ. ಶಾರ್ಫುದ್ದೀನ್ ಆಶ್ರಫ್ ಅವರ ಸ್ಥಾನದಲ್ಲಿ ಆಡಲಿದ್ದಾರೆ. ಸ್ಪಿನ್ನರ್ ನೂರ್ ಅಹಮದ್ , ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ತಂಡಕ್ಕೆ ಮರಳಿದ್ದಾರೆ. ನಜೀಬ್ ಹುಲ್ಲಾ ಜರ್ದಾನ್ ಉಪನಾಯಕನಾಗಿ ನೇಮಿಸಲಾಗಿದೆ.
ಅಫ್ಘಾನಿಸ್ಥಾನ ತಂಡ: ಮೊಹ್ಮದ್ ನಬಿ (ನಾಯಕ), ನಜಿಬುಲ್ಲಾ ಜರ್ದಾನ್ (ಉಪನಾಯಕ), ಅಫ್ಸಾರ್ ಜಜೈ(ವಿಕೆಟ್ ಕೀಪರ್), ಅಜಮಾತ್ ಹುಲ್ಲಾ ಒಮರಜಾಹಿ, ಫಾರೀದ್ ಅಹ್ಮದ್ ಮಲ್ಲಿಕ್, ಫಾಜಲ್ ಹಕ್ ಫಾರೂಕಿ, ಹಾಶಮತ್ ಹುಲ್ಲಾ ಶಾಹೀದಿ, ಹಜರ್ತ್ ಹುಲ್ಲಾ ಜಾಜೈ, ಇಬ್ರಾಹಿಂ ಜರ್ದಾನ್, ಕರೀಮ್ ಜನತ್, ಮುಜೀಬ್ ಉರ್ ರೆಹಮಾನ್, ನಜೀಬ್ ಹುಲ್ಲಾ ಜರ್ದಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ರೆಹಮಾನ್ ಹುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಶೀದ್ ಖಾನ್, ಮತ್ತು ಸಮಿಹುಲ್ಲಾ ಶಿನವಾರಿ.




