Friday, December 27, 2024

Latest Posts

7 ವರ್ಷದ ಬಳಿಕ ಗದ್ದಾಫಿ ಪುತ್ರ ರಿಲೀಸ್..!

- Advertisement -

www.karnatakatv.net :ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿ ದಿ.ಮೊಹಮ್ಮದ್ ಗದ್ದಾಫಿ ಪುತ್ರನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 7 ವರ್ಷಗಳಿಂದ ಗದಾಫಿ ಪುತ್ರ ಅಲ್ ಸಾದಿ ಗದ್ದಾಫಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ.

ನ್ಯಾಯಾಲಯದ ಆದೇಶದ ಮೇರೆಗೆ ಟ್ರಿಪೋಲಿಯ ಅಲ್ ಹಡಬ ಜೈಲಿನಲ್ಲಿದ್ದ ಸಾದಿ ಗದಾಫಿ ಬಿಡುಗಡೆಗೊಂಡಿರೋ ಬಗ್ಗೆ ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್ ಮಾಡಿದ್ದಾರೆ.

ಇನ್ನು ಗದ್ದಾಫಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಹಲವು ಮಂದಿ ಅಧಿಕಾರಿಗಳು ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ. 2011ರಲ್ಲಿ ಲಿಬಿಯಾದಲ್ಲಿ ನಾಗರಿಕ ದಂಗೆಯೆದ್ದು ದೀರ್ಘಕಾಲದಿಂದ ಅಧಿಕಾರದಲ್ಲಿದ್ದ ಗದ್ದಾಫಿ ಪದಚ್ಯುತಿಗೆ ಕಾರಣವಾಗಿತ್ತು. ನಂತರ ಗದ್ದಾಫಿ ಹತ್ಯೆಯಾಗಿತ್ತು. ದಂಗೆ ವೇಳೆ ಬಂಡುಕೋರರ ಮೇಲೆ ಸಿಡಿದೆದಿದ್ದ  ಗದ್ದಾಫಿ ಕೊನೆಗೆ ಬಂಡುಕೋರ ದಾಳಿಗೆ ಬಲಿಯಾಗಿದ್ರು. ಇನ್ನು ಗದ್ದಾಫಿಯ 8 ಮಕ್ಕಳ ಪೈಕಿ ಮೂವರು ಹತ್ಯೆಗೀಡಾಗಿದ್ರೆ ಮತ್ತಿಬ್ಬರು ಬಂಧನದಲ್ಲಿದ್ದಾರೆ. ಇನ್ನಿಬ್ಬರು ಅಲ್ಜೀರಿಯಾ ಮತ್ತು ಓಮನ್ ನಲ್ಲಿದ್ದಾರೆ.

- Advertisement -

Latest Posts

Don't Miss