Recipe: ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಮಕ್ಕಳು ಮನೆಯಲ್ಲೇ ಇದ್ದಾಗ ಪ್ರತಿದಿನ ಅವರಿಗೆ ಸ್ನ್ಯಾಕ್ಸ್ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ನಾವಿಂದು ಗ್ರಿಲ್ ಸ್ಯಾಂಡ್‌ವಿಚ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಬ್ರೆಡ್, ಚೀಸ್, ಮೆಯೋನೀಸ್, 1 ಈರುಳ್ಳಿ, ಕ್ಯಾಪ್ಸಿಕಂ, ಒಂದು ಬೌಲ್ ಬೇಯಿಸಿದ ಸ್ವೀಟ್ ಕಾರ್ನ್, ಚಾಟ್ ಮಸಾಲೆ, ಗರಂ ಮಸಾಲೆ, ಟೊಮೆಟೋ ಸಾಸ್, ಪುದೀನಾ ಚಟ್ನಿ, ಬೆಣ್ಣೆ.
ಮಾಡುವ ವಿಧಾನ: ಮೊದಲು ಒಂದು ಬೌಲ್‌ನಲ್ಲಿ ಕಾರ್ನ್, ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು, ಗರಂ ಮಸಾಲೆ, ಚಾಟ್ ಮಸಾಲೆ, ಹೆಚ್ಚು ಖಾರ ಬೇಕಿದ್ದಲ್ಲಿ ಖಾರದ ಪುಡಿ, ಮೆಯೋನಿಸ್ ಹಾಕಿ ಸಲಾಡ್ ಮಾಡಿಟ್ಟುಕೊಳ್ಳಿ. ಬಳಿಕ ಎರಡು ಬ್ರೇಡ್ ತೆಗೆದುಕೊಂಡು ಒಂದು ಬ್ರೆಡ್‌ಗೆ ಟೊಮೆಟೋ ಸಾಸ್ ಇನ್ನೊಂದು ಬ್ರೆಡ್‌ಗೆ ಪುದೀನಾ ಚಟ್ನಿ ಸ್ಪ್ರೆಡ್ ಮಾಡಿ. ಬಳಿಕ ರೆಡಿ ಮಾಡಿಟ್ಟ ಸಲಾಡ್, ಜೊತೆ ಚೀಸ್ ಸೇರಿಸಿ, ಎರಡೂ ಬ್ರೇಡ್ ಕೂಡಿಸಿ, ಗ್ರಿಲ್ ತವ್ವಾದಲ್ಲಿ ಬೆಣ್ಣೆ ಹಚ್ಚಿ ಕಾಯಿಸಿದ್ರೆ, ಗ್ರಿಲ್ ಸ್ಯಾಂಡ್‌ವಿಚ್ ರೆಡಿ. ಈ ಸ್ಯಾಂಡ್‌ವಿಚ್‌ಗೆ ನೀವು ಬೇಕಾದ್ದಲ್ಲಿ ಸೌತೇಕಾಯಿ ಮತ್ತು ಕ್ಯಾರೇಟ್ ಕೂಡ ಬಳಸಬಹುದು.