International news: ಮಾಜಿ ಪ್ರಧಾನಿ ಶೇಖ್ ಹಸೀನಾಳನ್ನು ಓಡಿಸಿ ಸದ್ಯ ಬಾಂಗ್ಲಾ ದೇಶದ ನೂತನ ಪ್ರಧಾನಿಯಾಗಿರುವ ಯೂನಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಭಾರತದ ವಿರುದ್ಧವಾಗಿ ಅವರು ಚೀನಾ ಅಧ್ಯಕ್ಷರ ಬಳಿ ಮಾತನಾಡಿದ್ದರು. ಭಾರತಕ್ಕೆ ಸೇರಿದ 7 ನದಿಗಳಿಗೆ ಯಾವುದೇ ಮಾರ್ಗವಿಲ್ಲ. ಹಾಗಾಗಿ ಭಾರತ ಚೀನಾ ಮತ್ತು ಬಾಂಗ್ಲಾ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಚೀನಾ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ವಿಸ್ತಾರ ಮಾಡಿಕೊಳ್ಳಲಿ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ, ಈಶಾನ್ಯವನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ಹೆಚ್ಚು ಬಲವಾದ ರಸ್ತೆ ಮತ್ತು ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಮಧ್ಯಂತ ಸರ್ಕಾರದ ಮೊಹಮ್ಮದ್ ಯೂನಿಸ್ ಸಪ್ತಸಹೋದರಿ ರಾಜ್ಯಗಳನು ಭೂಪ್ರಪದೇಶದಿಂದ ಆವೃತವಾಗಿದೆ ಮತ್ತು ಬಾಂಗ್ಲಾದೇಶ ಸಾಗರ ಪ್ರವೇಶದ ರಕ್ಷಕ ಎಂದು ಹೇಳಿರುವುದು ಅತ್ಯಂತ ಆಕ್ರಮಣಕಾರಿಯಾಗಿದೆ ಎಂದು ಹೇಳಿದ್ದಾರೆ.
ಯೂನಿಸ್ ಅವರ ಇಂಥ ಪ್ರಚೋದನಾಕಾರಿ ಹೇಳಿಕೆಯನ್ನು ನಾವು ಕಡೆಗಣಿಸಬಾರದು. ಏಕೆಂದರೆ ಅವು ಆಳವಾದ ಕಾರ್ಯತಂತ್ರ ಪರಿಗಣನೆಗಳು. ಮತ್ತು ದೀರ್ಘಕಾಲದ ಕಾರ್ಯಸೂಚಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಹೇಳಿದ್ದಾರೆ.
ಬಾಂಗ್ಲಾವನ್ನೇ ಒಡೆದು ದಾರಿ ಮಾಡ್ಕೋತೀವಿ ಎಂದ ಭಾರತ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಿಪ್ರಾ ಮೋತಾ ಪಕ್ಷದ ಪ್ರದ್ಯೋತ ಮಾಣಿಕ್ಯ ಅತ್ಯಂತ ಕ್ರೂರ ಮತ್ತು ಆಳವಾದ ಪರಿಹಾರವನ್ನು ಸಲಹೆಯಾಗಿ ನೀಡಿದ್ದಾರೆ. ಈಶಾನ್ಯ ಭಾಗದಲ್ಲಿ ಸಾಗರ ರಕ್ಷಕ ಪ್ರದೇಶ ತಾನೇ ಭಾರತದ ಈಶಾನ್ಯ ರಾಜ್ಯಗಳಿಗೆ ಸಮುದ್ರ ಪ್ರವೇಶ ಸಿಗಬೇಕೆಂದರೆ, ತನ್ನ ಬಳಿಯೇ ಬರಬೇಕು ಎನ್ನುವ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಬಾಂಗ್ಲಾ ದೇಶವನ್ನೇ ಇಬ್ಭಾಗ ಮಾಡಿದರೆ, ಈ ರೀತಿ ಸಮಸ್ಯೆಗಳೇ ಇರುವುದಿಲ್ಲ. ನೇರವಾಗಿ ಸಮುದ್ರ ಮಾರ್ಗ ಸಿಗಲಿದೆ. ಸಮುದ್ರ ಪ್ರವೇಶಕ್ಕಾಗಿ ಹೆಚ್ಚಿನ ದುಬಾರಿ ಇಂಜಿನಿಯರಿಂಗ್ ಐಡಿಯಾಗಳೂ ಅಗತ್ಯವಿರುವುದಿಲ್ಲ ಎಂದು ಹೇಳುವ ಮೂಲಕ ಬಾಂಗ್ಲಾಗೆ ತಿವಿದಿದ್ದಾರೆ.
ಯೂನಸ್ ಏನೆಂದು ಹೇಳಿಕೆ ನೀಡಿದ್ದರು..?
ಇನ್ನೂ ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎದುರು ಮಾತನಾಡಿರುವ ಈ ಮಧ್ಯಂತರಿ ಮೊಹಮ್ಮದ್, ನೀವು ನಮ್ಮ ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗಿ, ಅಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ನೆರವಾಗಿ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ ರಾಜ್ಯಗಳಲ್ಲಿ ಭೂ ಭಾಗವೇ ಹೆಚ್ಚಾಗಿದೆ. ಅವುಗಳು ನೇರ ಸಮುದ್ರ ಮಾರ್ಗವನ್ನು ಹೊಂದಿಲ್ಲದಿರುವುದು ಚೀನಾ ಹಾಗೂ ಬಾಂಗ್ಲಾ ದೇಶಗಳ ಮೇಲೆ ಅವಲಂಬನೆಯಾಗಿವೆ. ಈ ಭಾಗಗಳಲ್ಲಿ ಚೀನಾ ತನ್ನ ಆರ್ಥಿಕ ಚಟುವಟಿಕೆಗಳನ್ನು ವಿಸ್ತಾರ ಮಾಡಿಕೊಳ್ಳಲಿ ಎಂದು ಯೂನಸ್ ಹೇಳಿರುವುದು ಭಾರತಕ್ಕೆ ಆತಂಕ ತರಲು ಕಾರಣವಾಗಿದೆ.
ಅಲ್ಲದೆ ಚೀನಾ ದೇಶದ ಬಳಿ ಬಾಂಗ್ಲಾದ ಅಭಿವೃದ್ದಿಗಾಗಿ ಅಂಗಲಾಚಿಕೊಳ್ಳುವ ಮೂಲಕ ಭಾರತವನ್ನು ಟೀಕಿಸುವ ಕೆಲಸ ಮಾಡಿರುವ ಯೂನಸ್, ಭಾರತದ ಗಡಿಗೆ ಹೊಂದಿಕೊಂಡಿರುವ ತೀಸ್ತಾ ನದಿಯ ಸಂರಕ್ಷಣಾ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಚೀನಾ ಸರ್ಕಾರಕ್ಕೆ ಆಹ್ವಾನ ನೀಡಿದ್ದಾರೆ. ಇದೇ ಹೇಳಿಕೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.