International News: ಇದು ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ನಿಜ. ಗಲ್ಫ ಕಂಟ್ರಿಯಾದ ಸೌದಿ ಅರೇಬಿಯಾದಲ್ಲಿ 70 ವರ್ಷಗಳಿಂದ ಮದ್ಯ ಮಾರಾಟವಾಗುತ್ತಿರಲಿಲ್ಲ. ಆದರೆ ಇದೀಗ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿದ್ದು, ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದೆ.
ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಸಧೃಡಗೊಳಿಸಲು, ಸೌದಿ ರಾಜ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಮಿಷನ್ 2030ರ ಅಡಿಯಲ್ಲಿ ತನ್ನ ಆರ್ಥಿಕತೆ ಇನ್ನಷ್ಟು ಸಶಕ್ತಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನು ಮುಸ್ಲಿಂಮೇತರರಿಗೆ ಮಾತ್ರ ಯಾಕೆ ಮದ್ಯ ಮಾರಾಟ ಮಾಡಬೇಕು ಅಂದ್ರೆ, ಸೌದಿ ಅರೇಬಿಯಾದಲ್ಲಿ ಮುಸ್ಲಿಂರು ಮದ್ಯ ಸೇವಿಸುವುದು ಹರಾಮ್ ಎಂದು ಪರಿಗಣಿಸಲಾಗಿದ್ದು, ಈ ಕಾರಣಕ್ಕೆ ಆ ದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಈಗಲೂ ಅದೇ ಪದ್ಧತಿ ಮುಂದುವರಿದಿದೆ. ಹಾಗಾಗಿ ಮುಸ್ಲಿಂಮರನ್ನು ಬಿಟ್ಟು ಬೇರೆಯವರಿಗೆ ಮದ್ಯ ಸರಬರಾಾಜು ಮಾಡಬಹುದು.
ಇನ್ನು ಸೌದಿಅರೇಬಿಯಾದಲ್ಲಿ ಮುಸ್ಲಿಂ ವ್ಯಕ್ತಿ ಮದ್ಯ ಸೇವನೆ ಮಾಡಿದರೆ, ಅಂಥವರಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಹಾಗಾಗಿ ಕೆಲವೇ ಕೆಲವು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. 1950ರಲ್ಲಿ ನಿಷೇಧಿಸಲಾಗಿದ್ದ ಮದ್ಯ ಮಾರಾಟವನ್ನು ಇದೀಗ ಮತ್ತೆ ಶುರುಮಾಡಲಾಗುತ್ತಿದೆ.
ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್
ಮಕ್ಕಳ ವರ್ತನೆಗೆ ಮನನೊಂದು ಸಾಕುಪ್ರಾಣಿ ಹೆಸರಿಗೆ 23 ಕೋಟಿ ರೂ. ಆಸ್ತಿ ಬರೆದಿಟ್ಟ ವೃದ್ಧೆ


