Thursday, December 12, 2024

Latest Posts

ಸಮುದ್ರದಲ್ಲಿ ಸರ್ಜಿಕಲ್ ಸ್ಟ್ರೈಕ್ – ನಡುನೀರಲ್ಲಿ ನಡುಕಿದ ಪಾಕಿಸ್ತಾನ

- Advertisement -

ಪಾಕಿಸ್ತಾನ ಭಾರತದ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯೋದನ್ನ ಕೇಳಿದ್ದೀರಿ, ಸುಖಾಸುಮ್ಮನೆ ಪಾಕ್ ಸೈನಿಕರು ಗಡಿಯಲ್ಲಿ ಅಪ್ರಚೋದಿತ ಶೆಲ್ಲಿಂಗ್ ದಾಳಿ ಮಾಡ್ತಾನೆ ಇರ್ತಾರೆ. ಇನ್ನೊಂದ್ಕಡೆ ಪಾಕ್​​ನಿಂದ ಭಾರತದ ಒಳಕ್ಕೂ ಉಗ್ರರು ನುಸುಳುತ್ತಲೇ ಇರ್ತಾರೆ.. ಇಂಥದ್ದೇ ಕಿತಾಪತಿ ಮಾಡ್ತಿರೋ ಪಾಕಿಸ್ತಾನಕ್ಕೆ ಭಾರತ ಹಲವು ಬಾರಿ ಬುದ್ಧಿ ಕಲಿಸಿದೆ.. ಭಾರತದ ಈ ಹಿಂದೆ ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಕೂಡ ಮಾಡಿ ಬಂದಿದೆ. ಪಾಕ್ ಸೇನೆಯ ಕೃಪೆಯಲ್ಲೇ ಬದುಕ್ತಿರೋ ಉಗ್ರರನ್ನ ಮಟ್ಟ ಹಾಕಿ ಬಂದಿದೆ.. ಆದರೆ ಇಷ್ಟು ದಿನ ಪಾಕ್ ಸೇನೆಗೆ ಭೂಮಿ ಮೇಲೆ ಬುದ್ಧಿ ಕಲಿಸ್ತಿದ್ದ ಭಾರತದ ಯೋಧರು, ಈ ಬಾರಿ ಸಮುದ್ರದ ಮೇಲೆ ಬುದ್ಧಿ ಕಲಿಸಿದ್ದಾರೆ.. ಆಳ ಸಮುದ್ರದಲ್ಲೇ ಪಾಕಿಸ್ತಾನದ ಬೋಟ್ ಒಂದರ ಮೇಲೆ ಭಾರತದ ಯೋಧರು ಮಿನಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದಿದ್ದಾರೆ..

ಭಾನುವಾರ ಗುಜರಾತ್​​​ನ ಮೀನುಗಾರರ ತಂಡವೊಂದು ಮೀನುಗಾರಿಕೆಗೆಂದು ಅರಬ್ಬಿ ಸಮುದ್ರಕ್ಕೆ ಇಳಿದಿದ್ರು.. ಕಾಲಭೈರವ ಅನ್ನೋ ಹೆಸರಿನ ಬೋಟ್​ ಸಮುದ್ರದಲ್ಲಿ ತೇಲುತ್ತಾ ಅರಬ್ಬಿ ಸಮುದ್ರದಲ್ಲಿ ಸಾಗಿತ್ತು.. ಇದ್ರಲ್ಲಿದ್ದ 7 ಮಂದಿ ಮೀನುಗಾರರು ಮೀನುಗಳಿಗೆ ಬಲೆ ಹಾಕಿ ಹಿಡಿಯೋ ಕೆಲಸ ಮಾಡ್ತಿದ್ರು. ಕಾಲಭೈರವ ಹೆಸರಿನ ಈ ಬೋಟ್, ಭಾರತದ ಸಮುದ್ರಗಡಿಯಲ್ಲೇ ಇತ್ತು. ಇದು ಪಾಕ್​​ ಸಮುದ್ರ ಗಡಿಗೆ ಹೋಗೇ ಇರಲಿಲ್ಲ.. ಆದ್ರೆ ಅಷ್ಟರಲ್ಲಿ ಪಾಕಿಸ್ತಾನದ ಕೋಸ್ಟ್ ಗಾರ್ಡ್ ಪಡೆ ಭಾರತದ ಸಮುದ್ರದ ಪ್ರದೇಶಕ್ಕೆ ನುಗ್ಗಿ ಬಂದಿದೆ.. ಪಾಕಿಸ್ತಾನ ಮ್ಯಾರಿಟೈಮ್ ಸೆಕ್ಯೂರಿಟಿ ಏಜೆನ್ಸಿಯ ನಸ್ರತ್ ಹೆಸರಿನ ಬೋಟ್, ಭಾರತದ ಮೀನುಗಾರರಿದ್ದ ಬೋಟ್ ಬಳಿ ಬಂದಿದೆ.. ಕೂಡಲೇ ಪಾಕ್​​ ಕೋಸ್ಟ್ ಗಾರ್ಡ್ಸ್, ಭಾರತದ ಮೀನುಗಾರರನ್ನ ಹೆದರಿಸಿದ್ದಾರೆ.. ನೀವು ಪಾಕಿಸ್ತಾನದ ಸಮುದ್ರ ಪ್ರದೇಶಕ್ಕೆ ಬಂದಿದ್ದೀರಿ, ಹೀಗಾಗಿ ನಿಮ್ಮನ್ನ ಅರೆಸ್ಟ್ ಮಾಡ್ತೀವಿ ಅಂತ ಹೆದರಿಸಿದ್ದಾರೆ.. ಅಷ್ಟೇ ಅಲ್ಲ.. ಮೀನುಗಾರರ ಕಾಲಬೈರವ ದೋಣಿಯನ್ನೂ ಪಾಕ್​ ಕರಾವಳಿ ಪಡೆಯ ಸಿಬ್ಬಂದಿ ಧ್ವಂಸ ಮಾಡಿಬಿಟ್ಟಿದ್ದಾರೆ.. ಕಾಲಬೈರವ ದೋಣಿ ಈ ವೇಳೆ ಮುಳುಗಿಹೋಗಿದೆ.. ಭಾರತದ ಮೀನುಗಾರರನ್ನ ಬಂಧಿಸಿದ ಆ ಪಾಕಿಸ್ತಾನ್ ಕೋಸ್ಟ್ ಗಾರ್ಡ್ಸ್ ತನ್ನ ದೇಶದತ್ತ ಹೊರಟಿದ್ರು.. ಯಾವಾಗ ಭಾರತದ ದೋಣಿ ಮುಳುಗಿಹೋಯ್ತೋ ಅದೇ ಹೊತ್ತಲ್ಲಿ ಭಾರತದ ಕೋಸ್ಟಲ್ ಗಾರ್ಡ್ಸ್​ಗೂ ಸಂದೇಶ ಕೂಡಲೇ ಸಿಕ್ಕಿದೆ.. ಭಾರತದ ಮೀನುಗಾರರು ಸಮುದ್ರದಾಳದಲ್ಲಿ ಕಷ್ಟಕ್ಕೀಡಾಗಿದ್ದಾರೆ ಅನ್ನೋದು ಇಂಡಿಯನ್ ಕೋಸ್ಟ್ ಗಾರ್ಡ್ಸ್​ಗೆ ಗೊತ್ತಾಯ್ತು.

ತನ್ನ ಮೀನುಗಾರರು ಸಂಕಷ್ಟದಲ್ಲಿದ್ದಾರೆ ಅಂತಾ ಗೊತ್ತಾದ ತಕ್ಷಣ ಇಂಡಿಯನ್ ಕೋಸ್ಟ್ ಗಾರ್ಡ್ಸ್ ಕೂಡ ಆ ಪ್ರದೇಶದತ್ತ ಹೋದ್ರು.. ಐಸಿಜಿ ಬರ್ತಿರೋದನ್ನ ನೋಡಿದ ಪಿಎಮ್​ಎಸ್​ಎ ಬೋಟ್​ ಪಾಕಿಸ್ತಾನದತ್ತ ವೇಗವಾಗಿ ಹೋಗಲು ಮುಂದಾಯ್ತು.. ಆಗ ಐಎಸ್​​ಜಿ, ಪಾಕ್​​​ನ ಪಿಎಂಎಸ್​ಎ ಬೋಟ್ ಅನ್ನು ಸುಮಾರು 2 ಗಂಟೆಗಳ ಕಾಲ ಸಮುದ್ರದಲ್ಲೇ ಅಟ್ಟಾಡಿಸಿದೆ.. ಪಾಕ್​​ ಬೋಟ್​ ಭಾರತದ ಸಮುದ್ರ ಪ್ರದೇಶದಿಂದ ತನ್ನ ಸಮುದ್ರ ಪ್ರದೇಶದತ್ತ ಹೋಗ್ತಿರುವಾಗಲೇ ಐಸಿ​ಜಿ ಇದನ್ನ ಅಡ್ಡಗಟ್ಟಿ ಭಾರತೀಯ ಮೀನುಗಾರರನ್ನ ಬಿಡುಗಡೆ ಮಾಡುವಂತೆ ಎಚ್ಚರಿಸಿತ್ತು.

ಭಾರತದ ಮೀನುಗಾರರನ್ನ ಬಿಟ್ಟುಬಿಡುವಂತೆ ಪಿಎಂಎಸ್​ ನಸ್ರತ್​​ಗೆ ಐಸಿಜಿ ಎಚ್ಚರಿಕೆ ಕೊಡ್ತು.. ಇಷ್ಟಾದ್ರೂ ಪಾಕ್​ ಹಡಗಿನ ಸಿಬ್ಬಂದಿ ಇದಕ್ಕೆ ಒಪ್ಪಲೇ ಇಲ್ಲ.. ಭಾರತದ ಮೀನುಗಾರರೇ ನಮ್ಮ ವ್ಯಾಪ್ತಿಗೆ ಬಂದಿದ್ದಾರೆ. ಹೀಗಾಗಿ ಬಂಧಿಸಿದ್ದೀವಿ ಅಂತ ವಾದ ಮಾಡಿದ್ದಾರೆ.. ಇಷ್ಟೇ ಸುಮ್ಮನಾಗದೇ ಇಂಡಿಯನ್ ಕೋಸ್ಟ್ ಗಾರ್ಡ್ಸ್, ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ ಮತ್ತೆ ವಾರ್ನ್ ಮಾಡಿದ್ದಾರೆ.. ನೀವೇ ಭಾರತದ ಸಮುದ್ರ ಗಡಿಗೆ ಬಂದಿದ್ದೀರ… ಒಂದ್ವೇಳೆ ನಮ್ಮ ಮೀನುಗಾರರನ್ನ ಬಿಡದೇ ಇದ್ರೆ ನಿಮ್ಮ ಮೇಲೆ ಆಕ್ಷನ್ ತಗೋಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ.

ವಾರ್ನಿಂಗ್​​ಗೆ ಹೆದರಿದ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ ತಾನು ಬಂಧಿಸಿದ್ದ 7 ಮಂದಿ ಮೀನುಗಾರರನ್ನ ಭಾರತದ ಕೋಸ್ಟ್ ಗಾರ್ಡ್ಸ್ ವಶಕ್ಕೆ ಒಪ್ಪಿಸಿ ವಾಪಸ್ ಹೊರಟುಹೋಗಿದೆ..

ಸಾಗರದಲ್ಲಿ ಐಸಿಜಿ ಬೋಟ್, ಪಾಕ್​ ಬೋಟ್ ಅನ್ನು ಸುಮಾರು 2 ಗಂಟೆ ಅಟ್ಟಾಡಿಸಿದ ಬಳಿಕ ತನ್ನ ಮೀನುಗಾರರನ್ನ ರಕ್ಷಿಸಿಕೊಂಡಿದೆ. ಅದೃಷ್ಟವಶಾತ್ ಈ ಕಾರ್ಯಾಚರಣೆಯಲ್ಲಿ ಭಾರತದ 7 ಮೀನುಗಾರರೂ ಸುರಕ್ಷಿತವಾಗಿದ್ದಾರೆ.. ಒಂದ್ವೇಳೆ ಅವ್ರು ಪಾಕಿಸ್ತಾನದ ಜೈಲು ಸೇರಿದ್ದಿದ್ರೆ, ಅವ್ರನ್ನ ಬಿಡಿಸಿಕೊಳ್ಳೋಷ್ಟರಲ್ಲೇ ಎಷ್ಟೋ ವರ್ಷಗಳು ಬೇಕಾಗ್ತಿತ್ತು..

ಸಕಾಲಕ್ಕೆ ತನ್ನ ಮೀನುಗಾರರ ನೆರವಿಗೆ ಭಾರತದ ಕೋಸ್ಟ್ ಗಾರ್ಡ್ಸ್​ ಬಂದಿದ್ದು ಅವರ ಜೀವ ಉಳಿದಿದೆ. ದುರದೃಷ್ಟವಶಾತ್ ಕಾಲಬೈರವ ದೋಣಿ ಮಾತ್ರ ಸಮುದ್ರಪಾಲಾಗಿದೆ. ಸದ್ಯ ಐಸಿಜಿ ಹಡಗು ಗುಜರಾತ್​​ನ ಓಖಾ ಬಂದರು ತಲುಪಿದೆ. ಪೊಲೀಸರು ಮೀನುಗಾರರ ವಿಚಾರಣೆ ಮುಂದುವರೆಸಿದ್ದಾರೆ. ಪಾಕ್ ಸಮುದ್ರದ ಗಡಿ ಉಲ್ಲಂಘಿಸಿದ್ರಾ. ಪಾಕ್ ಬೋಟ್​​​​ನಲ್ಲಿ ಏನೇನೆಲ್ಲಾ ಆಯ್ತು ಅಂತ ವಿಚಾರಿಸಿ ಅವ್ರನ್ನ ಸುರಕ್ಷಿತವಾಗಿ ಮನೆಗೆ ಕಳಿಸಿಕೊಟ್ಟಿದ್ದಾರೆ.

- Advertisement -

Latest Posts

Don't Miss