Sunday, September 8, 2024

Latest Posts

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ನವಲಗುಂದ ಶಾಸಕ ಕೋನರೆಡ್ಡಿ,  ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿದ್ದ ಸುಮಾರು 18 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿರಲಿಲ್ಲ.

ಮುಖ್ಯಮಂತ್ರಿ ಸಂಪುಟದಲ್ಲಿ ನಿರ್ಧಾರ ಮಾಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಎರಡು ವಾರದಲ್ಲಿ ದುಡ್ಡು ಬಿಡುಗಡೆಗೆ ಕೋರ್ಟ್ ಆದೇಶ ಕೊಟ್ಟಿದೆ. ಬರಗಾಲ ಪರಿಹಾರ ಕೊಡೋಕೆ ಯಾವುದೇ ತಪ್ಪಿಲ್ಲ, ಕೂಡಲೇ ಬಿಡುಗಡೆ ಮಾಡಲು ಚುನಾವಣಾ ಆಯೋಗ ಕೂಡಾ ತಿಳಿಸಿದೆ. ಅಮಿತ್ ಶಾ ಅವರು ಇಷ್ಟಾದ್ರೂ ಸುಳ್ಳು ಹೇಳಬೇಕು ಅಂತಾ ಮಾಡಿದ್ದಾರೋ ‌ಏನೋ ಗೊತ್ತಿಲ್ಲ. ನಮ್ಮ ಮುಖ್ಯಮಂತ್ರಿಗಳು ಪ್ರಧಾನಿ ಹಾಗೂ ಅಮಿತ್ ಶಾ ಅವರಿಗೆ ಭೇಟಿ ಆದಾಗ ಮೂರೇ ದಿನದಲ್ಲಿ ಸಭೆ ಕರೆದು ಬಿಡುಗಡೆ ಮಾಡ್ತೇವೆ ಅಂತಾ ಹೇಳಿದ್ರು. ಆದ್ರೆ ಕರ್ನಾಟಕದವರು ತಡವಾಗಿ ಮನವಿ ಸಲ್ಲಿಸಿದ್ರು ಅಂತಾರೆ. ಚುನಾವಣೆ ಬಂದಿದೆ ಅಂತಾ ಹೇಗೆ ಬೇಕೋ ಹಾಗೇ ಮಾತನಾಡ್ತಾರೆ. ಅವರಿಗೆ ಸೋಲಿನ ಭಯ ಆರಂಭ ಆಗಿದೆ ಎಂದು ಕೋನರೆಡ್ಡಿ ಹೇಳಿದ್ದಾರೆ.

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ. ಬರಗಾಲದಿಂದ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲ ತಾಯಿ ಧೋರಣೆ ಮಾಡಿದೆ. ಮಲ ತಾಯಿ ಧೋರಣೆಗೆ ಕರ್ನಾಟಕದ ಜನ ಅವರಿಗೆ ತಕ್ಕ ಪಾಠ ಕಳಿಸ್ತಾರೆ. ಸುಪ್ರೀಂ ಕೋರ್ಟ್ ಆದೇಶ ಬಂದಿದೆ, ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು.

ರಾಜ್ಯದ ಜನತೆ ಪರವಾಗಿ ಸಿಎಂ, ಡಿಸಿಎಂ ಸುರ್ಜೆವಾಲ ಸೇರಿ ಎಲ್ಲಾ ಶಾಸಕರು, ಸಚಿವರು ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಬಿಜೆಪಿ ಅವರಿಗೆ ಈಗ ಅರಿವಾಗಿದೆ, ಬರಗಾಲ ಪರಿಹಾರ ಕೊಡಬೇಕಿತ್ತು, ತಪ್ಪು ಮಾಡಿದ್ವಿ ಅಂತಾ. ಜನರ ಬಗ್ಗೆ ಕಳಕಳಿ, ಕರ್ನಾಟಕದ ಜನರ ಮೇಲೆ ಗೌರವ ಇದಿದ್ರೆ ಇಷ್ಟೊತ್ತಿಗೆ ಬಿಡುಗಡೆ ಮಾಡಬೇಕಿತ್ತು ಎಂದು ಕೋನರೆಡ್ಡಿ ಹೇಳಿದ್ದಾರೆ.

ಜಿ ಎಸ್ ಟಿ ಜಾರಿ ವೇಳೆ ಏನು ಹೇಳಿದ್ರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ 50ರಷ್ಟು ಪಾಲು ಅಂದ್ರು. ಈಗ ನಮಗೆ ಕೊಡ್ತಾ ಇರೋದು ಎಷ್ಟು, ಕೇವಲ 13%. ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗಿದೆ. ಮೇಕೆ ದಾಟು, ಮಹದಾಯಿ ಮಾಡೇ ಬಿಡ್ತಿವಿ ಅಂದ್ರಿ, ನಿಮಗೆ ಯಾರು ಬೇಡ ಅಂದಿದ್ದು. ಮಹದಾಯಿ ಕಳಸಾ ಬಂಡೂರಿಗೆ ಒಂದು ಅನುಮತಿ ಕೊಡೋಕೆ ಆಗ್ಲಿಲ್ಲ ನಿಮಗೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಒಂದು ಸೆಕೆಂಡ್ ನಲ್ಲಿ ಮಾಡ್ತೇವೆ ಅಂತಾರೆ, 10 ವರ್ಷ ಅಧಿಕಾರದಲ್ಲಿ ಇದ್ದಿರಲ್ಲ ಮಾಡಬೇಕಿತ್ತು.ಮೇಕೆದಾಟು ಮಹದಾಯಿ ನಮ್ಮ ಎರಡು ಕಣ್ಣು ಆಲ್ವಾ..? ಬರ ಪರಿಹಾರಕ್ಕೆ ದಿಟ್ಟವಾಗಿ ತೀರ್ಮಾನ ತೆಗೆದುಕೊಂಡಿರುವ ನಮ್ಮ ಸಿಎಂ, ಡಿಸಿಎಂಗೆ ಅಭಿನಂದನೆ ಸಲಿಸ್ತೇನೆ. ದುಡ್ಡು ಬಿಡುಗಡೆ ಆದ ಕೂಡಲೇ ರೈತರ ಖಾತೆಗೆ ಜಮಾ ಮಾಡ್ತೇವೆ ಎಂದು ಕೋನರೆಡ್ಡಿ ಹೇಳಿದ್ದಾರೆ.

ದಿಂಗಾಲೇಶ್ವರ ಶ್ರೀ ಕಾಂಗ್ರೆಸ್ ಗೆ ಬೆಂಬಲ ವಿಚಾರದ ಬಗ್ಗೆ ಮಾತನಾಡಿದ ಕೋನರೆಡ್ಡಿ,  ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಬಿಜೆಪಿ ವಿರುದ್ಧ ಹೋರಾಟ ಮಾಡುವ ಉದ್ದೇಶ ಅವರದು. ಅವರಿಗೆ ನಾವು ಬೆಂಬಲ ಕೇಳ್ತೇವೆ, ಅದ್ರಲ್ಲಿ ತಪ್ಪೇನಿದೆ. ಅವರು ಬಿಜೆಪಿ ವಿರುದ್ಧ ಇದಾರೆ, ನಾವೇ ಅವರ ಕಾಲು ಬಿದ್ದು ಕೇಳ್ತೇವೆ ದಯವಿಟ್ಟು ನಮಗೆ ಮತ ಹಾಕಿ ಅಂತಾ ಎಂದು ಕೋನರೆಡ್ಡಿ ಹೇಳಿದ್ದಾರೆ.

ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಿವೆ: ಬಸವರಾಜ್ ಬೊಮ್ಮಾಯಿ ವಾಗ್ದಾಳಿ

ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ‌ನಡೀತಿದೆಯಾ? ಜನಪರ ಸರ್ಕಾರ‌ ಇದೆಯಾ?: ಪಿ.ರಾಜೀವ್

ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ಬಿಜೆಪಿಗೆ ಶಾಕ್: ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ..

- Advertisement -

Latest Posts

Don't Miss