ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

International News: ಏರ್ ಇಂಡಿಯಾ ವಿಮಾನದಲ್ಲಿ ಹಲವು ಬಾರಿ, ಹಲವು ರೀತಿಯ ಯಡವಟ್ಟು ನಡೆದು ಹೋಗಿದೆ.  ಊಟದಲ್ಲಿ ಹಲ್ಲಿ, ಕಲ್ಲು, ಇರುವೆ, ಜಿರಲೆ ಎಲ್ಲರೂ ಆಗಾಗ ಸಿಗುತ್ತಿರುತ್ತಾರೆ. ಇದೀಗ ವೆಜ್ ಊಟದಲ್ಲಿ ಚಿಕನ್ ಪೀಸ್ ಸಿಕ್ಕಿದೆ. ಯಾರಿಗೆ ಈ ರೀತಿಯಾಗಿದೆಯೋ, ಆಕೆ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಪ್ರೀಸ್ ನೀವು ಆ ಟ್ವೀಟ್ ತೆಗಿಯಿರಿ. ನಮ್ಮ ತಪ್ಪನ್ನು ಮನ್ನಿಸಿ, ನಮ್ಮನ್ನು ಕ್ಷಮಿಸಿ ಎಂದು ಏರ್ ಇಂಡಿಯಾ ಕ್ಷಮೆಯಾಚಿಸಿದೆ.

ವೀರ್ ಜೈನ್ ಎಂಬ ಮಹಿಳೆ, ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅವರು ವೆಜ್ ಊಟವನನ್ನು ಆರ್ಡರ್ ಮಾಡಿದ್ದಾರೆ. ಆದರೆ ವೆಜ್ ಊಟದಲ್ಲಿ ಚಿಕನ್ ಪೀಸ್ ಸಿಕ್ಕಿದೆ. ಕೂಡಲೇ ಆ ಫೋಟೋವನ್ನು ತೆಗೆದು, ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಈ ಒಂದು ಪೋಸ್ಟ್ ಶೇರ್ ಆಗುತ್ತಿದ್ದಂತೆ, ನೆಟ್ಟಿಗರು ಕೂಡ ಈ ಬಗ್ಗೆ ಅಸಮಾದಾನ ಹೊರಹಾಕಿದ್ದಾರೆ. ಅಲ್ಲದೇ, ಇವರಂತೆ ಇನ್ನೂ ಹಲವರು ವೆಜ್ ಊಟ ಕೇಳಿದರೂ, ನಿರ್ಲಕ್ಷ್ಯದಿಂದ ಅವರಿಗೂ ಈ ರೀತಿ ನಾನ್‌ವೆಜ್ ಸರಬರಾಜು ಮಾಡಿದ್ದಾರೆಂದು ಹಲವರು ಆರೋಪಿಸಿದ್ದಾರೆ.

ಇನ್ನು ವೀರ್ ಜೈನ್ ಟ್ವೀಟ್ ಮಾಡಿದಾಗ, ಅದನ್ನು ಕಂಡು, ದಯವಿಟ್ಟು ಈ ಟ್ವೀಟ್ ಡಿಲೀಟ್ ಮಾಡಿ, ನಮ್ಮಿಂದ ತಪ್ಪಾಗಿದೆ ಎಂದು ಏರ್ ಇಂಡಿಯಾ ಕ್ಷಮೆಯಾಚಿಸಿದೆ. ಇನ್ನು ಈ ರೀತಿಯ ಎಡವಟ್ಟು ಸುಮಾರಾಗಿದ್ದು, ಪ್ರಯಾಣಿಕರಿಗೆ ಊಟದಲ್ಲಿ ಹಲ್ಲಿ, ಇರುವೆ, ಕಲ್ಲು ಇತ್ಯಾದಿ ಸಿಕ್ಕಿರುವ ಉದಾಹರಣೆ ಇದೆ.

ರೇಪ್‌ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..

ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್

ಅರಬ್ ಕಂಟ್ರಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ..

About The Author