Sunday, July 6, 2025

Latest Posts

ಅರಬ್ ಕಂಟ್ರಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ..

- Advertisement -

International News: ಅರಬ್ ದೇಶವಾದ ಅಬುದಾಬಿಯಲ್ಲಿ ಇದೇ ವರ್ಷಾ ಫೆಬ್ರವರಿ 14ರಂದು ಹಿಂದೂ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ರಾಮಮಂದಿರ ಉದ್ಘಾಟನೆ ಬಿಟ್ಟರೆ, ಹಿಂದೂಗಳಿಗೆ ಇದು ಈ ವರ್ಷದ ಎರಡನೇಯ ಹೆಮ್ಮೆಯ ವಿಷಯವಾಗಿದೆ. ಏಕೆಂದರೆ, ಈ ದೇವಸ್ಥಾನ ಅರಬ್ ಕಂಟ್ರಿಯಲ್ಲಿ ಉದ್ಘಾಟನೆಯಾಗಲಿರುವ ಮೊದಲ ಹಿಂದೂ ದೇವಸ್ಥಾನವಾಗಿದೆ.

ಅಬುದಾಬಿಯ ಮೊದಲ ಬಿಎಪಿಎಸ್ ಹಿಂದೂ ದೇವಾಲಯ ಇದಾಗಿದ್ದು, ಅಬು ಮುರೇಖಾ ಪ್ರದೇಶದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. 2015ರಲ್ಲಿ ಮೋದಿ ಮೊದಲ ಬಾರಿ ಪ್ರಧಾನಿಯಾಗಿದ್ದಾಗ, ಅಬುದಾಬಿಗೆ ಭೇಟಿ ನೀಡಿದ್ದರು. ಇಂದಿರಾಗಾಂಧಿ ಬಳಿಕ ಈ ರಾಷ್ಟ್ರಕ್ಕೆ ಭೇಟಿ ನೀಡಿದ ಪ್ರಧಾನಿ ಅಂದ್ರೆ ಅದು ನರೇಂದ್ರ ಮೋದಿ. ಆಗಲೇ ಅವರು ಹಿಂದೂ ದೇವಸ್ಥಾನಕ್ಕಾಗಿ ಜಾಗ ಮಂಜೂರಿಗೆ ಮನವಿ ಮಾಡಿ ಬಂದಿದ್ದರು.

2018ರಲ್ಲಿ ಮೋದಿ ಪುನಃ ಅಬುದಾಬಿಗೆ ಹೋಗಿ, ಅಲ್ಲಿ 700 ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ನಿರ್ಮಾಣಕ್ಕೆ ಯೋಜನೆ ಉದ್ಘಾಟಿಸಿ ಬಂದಿದ್ದರು. ಇದೀಗ ಅಬುದಾಬಿಯಲ್ಲಿ ಭವ್ಯ ಹಿಂದೂ ಮಂದಿರ ನಿರ್ಮಾಣವಾಗಿದೆ. ಫೆಬ್ರವರಿ 14ರಂದು ವಸಂತ ಪಂಚಮಿ ಇದ್ದು, ಆ ದಿನ ಪ್ರಧಾನಿ ಮೋದಿ, ಈ ಹಿಂದೂ ದೇವಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ.

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

ರೇಪ್‌ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..

ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..

- Advertisement -

Latest Posts

Don't Miss