Sunday, November 16, 2025

Latest Posts

ಆಳಂದ ‘ವೋಟ್ ಚೋರಿ’ ಪ್ರಕರಣ, ದುಬೈ ಕಿಂಗ್‌ಪಿನ್‌ಗೆ SIT ಬಲೆ!

- Advertisement -

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ನಡೆದಿದ್ದ ‘ವೋಟ್ ಚೋರಿ’ ಪ್ರಕರಣದಲ್ಲಿ ಮಹತ್ವದಟ್ವಿಸ್ಟ್ ಸಿಕ್ಕಿದೆ. ಪ್ರತಿ ಮತದಾರರ ಹೆಸರನ್ನು ಅಳಿಸಲು ₹80 ರೂ. ಪಡೆದು, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಸುಮಾರು 6,000 ಮತಗಳನ್ನು ಅಳಿಸಲು ಯತ್ನಿಸಿದ್ದ ಆರೋಪಿಗಳು ಈ ಪ್ರಕರಣದ ಕೇಂದ್ರಬಿಂದುವಾಗಿದ್ದಾರೆ.

ಪ್ರಮುಖ ಆರೋಪಿಗಳಾಗಿ ಮೊಹಮ್ಮದ್ ಅಶ್ಫಾಕ್ ಮತ್ತು ಮೊಹಮ್ಮದ್ ಅಕ್ರಂನನ್ನು ಗುರುತಿಸಲಾಗಿದೆ. ಪ್ರಮುಖ ಆರೋಪಿ ಅಶ್ಫಾಕ್ ಪ್ರಸ್ತುತ ದುಬೈನಲ್ಲಿದ್ದರೆ, ಆತನ ಸಹಚರ ಅಕ್ರಂ ಮತ್ತು ನಾಲ್ಕು ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಎಸ್‌ಐಟಿ ಅಧಿಕಾರಿಗಳು ಅಕ್ಟೋಬರ್ 23ರಂದು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕಿಂಗ್‌ಪಿನ್ ಮೊಹಮ್ಮದ್ ಅಶ್ಫಾಕ್ ಪತ್ತೆಗಾಗಿ ಪೊಲೀಸರು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಎಸ್‌ಐಟಿ ಯ ಮುಂದಿನ ನಡೆ ಏನು ಅನ್ನಿದನ್ನ ನೋಡಿದ್ರೆ ಎಸ್‌ಐಟಿ ಮುಖ್ಯವಾಗಿ ಈ ನಾಲ್ಕು ಅಂಶಗಳಿಗೆ ಗಮನ ಹರಿಸಿದೆ. ಮತದಾರರ ಹೆಸರು ಅಳಿಸಲು ಬಳಸಿದ ₹4.8 ಲಕ್ಷ ರೂ. ಹಣದ ಮೂಲ ಪತ್ತೆಹಚ್ಚಲಾಗುತ್ತಿದೆ.
ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ ಅನ್ನು ಹೇಗೆ ದುರ್ಬಳಕೆ ಮಾಡಿದರು ಎಂಬುದರ ಬಗ್ಗೆ ತಾಂತ್ರಿಕ ತನಿಖೆ ನಡೆಯುತ್ತಿದೆ. ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯ ತಾಂತ್ರಿಕ ವಿವರಗಳನ್ನು ನೀಡುವಂತೆ ಎಸ್‌ಐಟಿ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಶೀಘ್ರದಲ್ಲೇ ಎಸ್‌ಐಟಿ ತನ್ನ ಮಧ್ಯಂತರ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ನಿರೀಕ್ಷೆಯಿದೆ. SIT ಪ್ರಕಾರ, ಆರೋಪಿ ಅಶ್ಫಾಕ್ ಕಲಬುರಗಿಯಲ್ಲಿ ಡೇಟಾ ಸೆಂಟರ್ ಸ್ಥಾಪಿಸಿ, ವ್ಯವಸ್ಥಿತವಾಗಿ ಮತದಾರರ ಹೆಸರುಗಳನ್ನು ಅಳಿಸುವ ದಂಧೆ ನಡೆಸಿದ್ದರು. ಈ ಕ್ರಮದಲ್ಲಿ ಪ್ರಮುಖವಾಗಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನೇ ಗುರಿ ಮಾಡಲಾಗಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸಿದ ನಂತರ, ಪ್ರಕರಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ ವಿರುದ್ಧ ಸೋತಿದ್ದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಆಸ್ತಿಗಳ ಮೇಲೆಯೂ ಮೊದಲು ದಾಳಿ ನಡೆದಿತ್ತು. ಈ ಪ್ರಕರಣವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸ್ಫೋಟಕ ತಿರುವುಗಳನ್ನು ನೀಡುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss