Hassan News: ಹಾಸನ: ಈ ಭೂಮಿ ಮೇಲೆ ಜನ್ಮ ತಾಳಿದ ಯಾರು ಶ್ರೀಮಂತರಲ್ಲ ಹಾಗೂ ಬಡವರಲ್ಲ ಎಲ್ಲಾರು ಸಮಾನರು ಆಗಿರುತ್ತಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಗೌರವವನ್ನು ಹೆಚ್ಚಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಅಧ್ಯಕ್ಷರಾದ ಟಿ.ಎನ್. ಇನವಳಿ ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬಡತನ ನಿರ್ಮೂಲನ ಯೋಜನೆಗಳ ಪರಿಣಾಮ ಕಾರಿ ಅನುಷ್ಠಾನ ಕುರಿತು ಯೋಜನೆ ೨೦೧೫ರ ಅನುಷ್ಠಾನಕ್ಕಾಗಿ ಸರಕಾರದ ವಿವಿಧ ಸವಲತ್ತುಗಳ ಕುರಿತು ಬೃಹತ್ ಕಾನೂನು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಮಹಿಳೆಯರಿಗೆ ಕಾನೂನಿನಲ್ಲಿ ಎಲ್ಲಾ ರೀತಿಯ ಸವಲತ್ತುಗಳಿದ್ದು, ಅದನ್ನು ಅನುಷ್ಠಾನ ಮಾಡುವುದುರ ಬಗ್ಗೆ ತಿಳಿಯಬೇಕು. ಯಾರು ಬಡವರಾಗಿ ಹುಟ್ಟುವುದಿಲ್ಲ. ಆದರೇ ಮನೆಯಲ್ಲಿ ಬಡತನ ಇರಬಹುದು. ಜನ್ಮ ತಾಳಿದ ವೇಳೆ ಎಲ್ಲಾರ ಸಮಾನರೆ. ಬೆಳೆಯುತ್ತಾ ಬದಲಾವಣೆ ಆಗುತ್ತಾರೆ. ಶಾಸಕಾಂಗ ಕಾನೂನು ಮಾಡುತ್ತದೆ, ಕಾಯಾಂಗವು ಅನುಷ್ಠಾನಗೊಳಿಸುತ್ತದೆ ಎಂದರು. ಇದರಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಜಾರಿಗೆ ತರುತ್ತಾರೆ. ಆದರೇ ಯಾರಾದರೂ ತಪ್ಪು ಮಾಡಿದಾಗ ಮಾತ್ರ ನಾವುಗಳು ಬರುತ್ತೇವೆ. ಶಿಕ್ಷಣ ಪಡೆಯವುದು ಕೂಡ ಒಂದು ಹಕ್ಕು, ಮೂಲಭೂತ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು. ಮಹಿಳೆಯರು ಕೆಲಸ ಮಾಡಿದರೇ ಸಮಾಜ ಆರೋಗ್ಯಕರವಾಗಿರುತ್ತದೆ. ಶಿಕ್ಷಣಹೊಂದಿದ್ದರೇ ಸಾಕಾಗುವುದಿಲ್ಲ. ಜೊತೆಯಲ್ಲಿ ಏನು? ಹೇಗೆ ಪಡೆಯಬೇಕು ಎಂಬುದನ್ನೆಲ್ಲ ತಿಳಿಯಬೇಕು ಎಂದು ಸಲಹೆ ನೀಡಿದರು. ಮಹಿಳೆಗೆ ವಿಧ್ಯೆ ಜೊತೆಗೆ ಸಮಾಜದ ಬಗ್ಗೆ ತಿಳುವಳಿಕೆ ತಿಳಿದುಕೊಳ್ಳುವುದು ಮುಖ್ಯ. ಸರಕರದಲ್ಲಿ ಇರುವ ಸೌಲಭ್ಯದ ಬಗ್ಗೆ ಸಾಮಾಜಿಕ ತಿಳುವಳಿಕೆ ತಿಳಿದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮ ಮಾತನಾಡಿ, ಇರುವ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಗ್ರಾಮೀಣ ಪ್ರದೇಶದ ಭಾಗಗಳಲ್ಲಿ ಎರಡು ಫಿಲ್ಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿಯವರ ಮೂಲಕ ಮಾಹಿತಿಗಳನ್ನು ಒದಗಿಸಲು ಕಾರ್ಯವನ್ನು ಕಾನೂನು ಸೇವೆಗಳ ಪ್ರಾಧೀಕಾರದವರು ಮಾಡುತ್ತಿದ್ದಾರೆ ಎಂದರು. ಕೊರೋನಾ ಸಂದರ್ಭದಲ್ಲಿ ಈ ಎರಡು ಪಿಲ್ಲರ್ ಗಳೂ ಉತ್ತಮ ಕಾರ್ಯನಿರ್ವಹಿಸಿ ಕೊರೋನಾ ಸೋಂಕು ಹೋಗಲಾಡಿಸಿ ಜನರಿಗೆ ಸೇವೆ ನೀಡುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿದೆ ಎಂದು ಶ್ಲಾಘನೆವ್ಯಕ್ತಪಡಿಸಿದರು. ಹೆಲ್ತ್ ಅಂಡ್ ನ್ಯೂಟ್ರಿಷನ್ ಸರ್ವೆ ಎನ್ನುವ ಬಗ್ಗೆ ಮಾಹಿತಿ ಬಂದಿದ್ದು, ನಾವು ಕೆಲಸ ಮಾಡುವುದಿಲ್ಲ ಎಂದು ಈ ಬಗ್ಗೆ ನೀವುಗಳು ಹೋರಾಟ ಕೂಡ ಮಾಡಿದ್ದು, ಈ ಯೋಜನ ಎ ಕೇಂದ್ರದಿಂದ ಸರ್ವೆ ಆಗುತ್ತಿದ್ದು, ಈ ಬಗ್ಗೆ ಎಲ್ಲಾ ಮಾಹಿತಿ ಪುಸ್ತಕ ಕೊಡಲಾಗುತ್ತಿದ್ದು, ಕಡ್ಡಾಯವಾಗಿ ಎಲ್ಲಾರು ನಿರ್ವಹಿಸಬೇಕು ಎಂದು ಹೇಳಿದರು. ನೂರಕ್ಕೆ ಶೇಕಡ ೪೫ ಪರ್ಸೇಂಟ್ ಸಿಸರಿನ್ ಹೆರಿಗೆ ಆಗುತ್ತಿದ್ದು, ಈ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದಾಗ ಮೊದಲ ಡೆಲಿವರಿ ವೇಳೆ ಮಹಿಳೆಯಲ್ಲಿ ಆತಂಕ, ವ್ಯತ್ಯಸವಾದಗ ತಕ್ಷಣದಲ್ಲಿ ಸಿಜರಿನ್ ಮಾಡಿಸಲಾಗುತ್ತಿದೆ. ಇರುವ ಆಶಾ ಕಾರ್ಯಕರ್ತೆಯರು ಮೊದಲ ಹೆರಿಗೆ ವೇಳೆ ಮನೆ ಮನೆಗೆ ಹೋಗಿ ಅವರಿಗೆ ತಿಳುವಳಿಕೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್, ಸಮಾಜ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ಹೆಚ್.ವಿ. ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಎಂ. ವಿಜಯ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಆರ್. ಪುನೀತ್ ಇತರರು ಉಪಸ್ಥಿತರಿದ್ದರು.
ಭಾರೀ ಗಾಳಿ ಮಳೆಗೆ ಕುಸಿದ ಮನೆಗಳು: ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ಪರಿಶೀಲನೆ.
‘ಅಹಂಕಾರದ ಪರಮಾವಧಿ! ಕಾಂಗ್ರೆಸ್ ಸರಕಾರಕ್ಕೆ ಕೇಸರಿ ಎಂದರೆ ದ್ವೇಷ, ಶತ್ರುಭಾವ!’
ಬಿಬಿಎಂಪಿ ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ